ಬೆಂಗಳೂರು: ವೈಟ್‌ಫೀಲ್ಡ್‌ನಿಂದ ಭಾನುವಾರ ನಾಪತ್ತೆಯಾಗಿದ್ದ ಬಾಲಕ ಪರಿಣವ್ (12) ಹೈದರಾಬಾದ್‌ನಲ್ಲಿ ಬುಧವಾರ ಪತ್ತೆಯಾಗಿದ್ದಾನೆ.
ಹೈದರಾಬಾದ್‌ನ ನಾಂಪಲ್ಲಿ ಮೆಟ್ರೊ ನಿಲ್ದಾಣದಲ್ಲಿ ಪತ್ತೆಯಾಗಿದ್ದು ಅಲ್ಲಿನ ಪೊಲೀಸರು ಬಾಲಕನನ್ನು ರಕ್ಷಿಸಿ ವೈಟ್‌ಫೀಲ್ಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಜಯನಗರದ ಸುಖೇಶ್ – ನಿವೇದಿತಾ ದಂಪತಿ ಪುತ್ರ ಪರಿಣವ್. ಗುಂಜೂರಿನ ಡೆನ್ ಅಕಾಡೆಮಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದು ತ್ತಿದ್ದ.
ವೈಟ್ಫೀಲ್ಡ್ನ ಅಲೆನ್ ಟ್ಯೂಷನ್ ಸೆಂಟರ್‌ಗೆ ಮಗನನ್ನು ಕಳುಹಿಸಿ, ತಂದೆ ಮನೆಗೆ ಬಂದಿದ್ದರು. ಮಧ್ಯಾಹ್ನ ಕರೆ ತರಲು ಹೋಗುವುದು ತಡವಾಗಿದ್ದರಿಂದ ನಾಪತ್ತೆ ಆಗಿದ್ದ ಎನ್ನಲಾಗಿದೆ.
ಟ್ಯೂಷನ್ ಸೆಂಟರ್ನಿಂದ ಮಾರತ್ತಹಳ್ಳಿವರೆಗೆ ಬಾಲಕ ನಡೆದುಬಂದಿದ್ದು, ನಂತರ ಬಿಎಂಟಿಸಿ ಬಸ್ ಹತ್ತಿದ್ದು ಸಿಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ತಂದೆ ನೀಡಿದ ದೂರು ಆಧರಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದ ವೈಟ್‌ಫೀಲ್ಡ್ ಠಾಣೆ ಪೊಲೀಸರು, ನಾಲ್ಕು ತಂಡ ರಚಿಸಿ ಬಾಲಕನ ಪತ್ತೆಗೆ ಕಾರ್ಯಾ ಚರಣೆ ನಡೆಸಿದ್ದರು. ಬಾಲಕ ರೈಲಿನಲ್ಲಿ ಹೈದರಾಬಾದ್‌ಗೆ ತೆರಳಿದ್ದಾನೆ ಎಂದು ಮೂಲಗಳು ತಿಳಿಸಿವೆ.