Thursday, 12th December 2024

ರಸ್ತೆ ಗುಂಡಿ ಗುರುತಿಸಿ ಬಹುಮಾನ ಗೆಲ್ಲಿ

ತುಮಕೂರು: ನಗರದ ರಸ್ತೆಗಳಲ್ಲಿ ಅವ್ಯಾಹತವಾಗಿ ಬಿದ್ದಿರುವ ಗುಂಡಿಗಳನ್ನು ಕಂಡರೂ ಕಾಣದಂತಿರುವ ಆಡಳಿತದ ಜನಪ್ರ ತಿನಿಧಿಗಳಿಗೆ ಎಚ್ಚರಿಕೆ ನೀಡುವ ಸಲುವಾಗಿ ಜಿಲ್ಲಾ ಯುವ ಕಾಂಗ್ರೆಸ್ ಘಟಕ ರಸ್ತೆಯ ಗುಂಡಿಗಳು ಹಾಗೂ ಕಳಪೆ ಕಾಮಗಾರಿ ಗಳನ್ನು ಗುರುತಿಸಿ ಬಹುಮಾನ ಪಡೆಯುವಂತೆ ನಾಗರಿಕರಿಗೆ ವಿಶೇಷ ಕರೆ ನೀಡಿದೆ.

ನಗರದಲ್ಲಿ ಹೆಚ್ಚಾಗಿರುವ ರಸ್ತೆಯ ಗುಂಡಿಗಳು ಹಾಗೂ ಕಳಪೆ ಕಾಮಗಾರಿಗಳನ್ನು ಸಂಬಂಧ ಪಟ್ಟ ಕರ‍್ಯಾಲಯಗಳಿಗೆ ಹಾಗೂ ನಗರದ ಜನಪ್ರತಿನಿಧಿಗಳಿಗೆ ಮನದಟ್ಟು ಮಾಡುವ ಉದ್ದೇಶದಿಂದ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ರಸ್ತೆ ಗುಂಡಿಗಳು ಹಾಗೂ ಕಳಪೆ ಕಾಮಗಾರಿ ಗುರುತಿಸಿ ಆರ‍್ಷಕ ಬಹುಮಾನ ಗೆಲ್ಲಿರಿ ಎಂಬ ವಿನೂತನ ಕರ‍್ಯಕ್ರಮವನ್ನು ಹಮ್ಮಿಕೊಂಡಿದೆ.

ನಗರದ ಜನರ ಗಮನಕ್ಕೆ ಬರುವ ರಸ್ತೆ ಗುಂಡಿಗಳು ಹಾಗೂ ಕಳಪೆ ಕಾಮಗಾರಿಗಳ ಭಾವಚಿತ್ರ ಹಾಗೂ ಸ್ಥಳವನ್ನು ಗುರುತಿಸಿ ನಿಮ್ಮ ಅನಿಸಿಕೆಗಳೊಂದಿಗೆ ವಾಟ್ಸಾಫ್ ಸಂ. ೯೮೪೫೨ ೦೦೨೩೩ ಗೆ ಸೆ. ೧೫ ರಿಂದ ೩೦ರ ಒಳಗಾಗಿ ಭಾವಚಿತ್ರ ಸಹಿತ ಕಳುಹಿಸುವಂತೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆಮಠ್ ಕೋರಿದ್ದಾರೆ.

ವಿಡಂಬನಾತ್ಮಕವಾದ ಈ ಸ್ರ‍್ಧೆಯಲ್ಲಿ ಉತ್ತಮ ಗುಂಡಿ ಚಿತ್ರ ಕಳುಹಿಸಿದವರಿಗೆ ಅಕ್ಟೋಬರ್ ೨ ರಂದು ಗಾಂಧೀ ಜಯಂತಿಯ ದಿನದಂದು ಬಹುಮಾನ ವಿತರಣೆ ಮಾಡುವುದಾಗಿ ತಿಳಿಸಿದ್ದು, ಹಾಗೇಯೇ ಜನ ಸಾಮಾನ್ಯರು ಕಳುಹಿಸಿಕೊಟ್ಟ ಮಾಹಿತಿಯನ್ನಾ ಧರಿಸಿ ಹೋರಾಟ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.