Sunday, 15th December 2024

ಊಟ, ನೀರಿಲ್ಲದೇ ಈ ಮಹಿಳೆ ಬದುಕಿದ್ದೇ ಪವಾಡ..!

ತೋಟಗಂಟಿ: ಗದಗ ಜಿಲ್ಲೆಯ ತೋಟಗಂಟಿ ಎಂಬಲ್ಲಿ ಮಹಿಳೆಯೊಬ್ಬಳು ಬಾವಿಯೊಂದರಲ್ಲಿ ಪತ್ತೆಯಾಗಿದ್ದಾಳೆ.

ಸಂತ್ರಸ್ಥ ಮಹಿಳೆಯು, ಅಪರಿಚಿತ ಮಹಿಳೆಯು ಕೈಬಳೆ, ಕಾಲುಂಗುರ ನೀಡುವಂತೆ ಒತ್ತಾಯಿಸಿದ್ದು, ಗೋವಿನ ಜೋಳದ ಹೊಲದಲ್ಲಿ ಎಳೆದುಕೊಂಡು ಹೋಗಿದ್ದಾಳೆ. ನನ್ನ ತಾಳಿಯನ್ನು ಕಿತ್ತುಕೊಂಡು ನನ್ನನ್ನು ಬಾವಿಗೆ ತಳ್ಳಿ ಹೋದಳು. ಬಾವಿಗೆ ಬಿದ್ದ ಮಾರನೇ ದಿನ ನನಗೆ ಪ್ರಜ್ಞೆ ಬಂದಿದೆ ಎಂದಿದ್ದಾಳೆ. ತನ್ನ ಕಣ್ಣು ಕಾಣದಂತೆ ಮರೆ ಮಾಡಿ, ಕುತ್ತಿಗೆ ಹಿಡಿದು ಬೆದರಿಕೆ ಕೂಡ ಒಡ್ಡಿದ್ದಾಳೆ ಎಂದು ಬಾವಿಯಲ್ಲಿ ಪತ್ತೆಯಾದ ಮಹಿಳೆ ಹೇಳಿಕೊಂಡಿದ್ದಾಳೆ.