Sunday, 15th December 2024

Workshop: ಬಯೋಮೆಡಿಕಲ್‌ ವೇಸ್ಟ್‌ ಮ್ಯಾನೇಜ್ಮೆಂಟ್‌ ಕಾರ್ಯಾಗಾರ

ತುಮಕೂರು : ನಗರದ ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕೇಂದ್ರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೆಪಿಎಂಸಿ ವತಿಯಿಂದ ನಡೆದ ಬಯೋಮೆಡಿಕಲ್‌ ವೇಸ್ಟ್‌ ಮ್ಯಾನೇಜ್ಮೆಂಟ್‌ ಕುರಿತ ಕಾರ್ಯಾಗಾರವನ್ನು ಸಿದ್ಧಗಂಗಾ ವೈದ್ಯಕೀಯ ಮಹಾ ವಿದ್ಯಾಲಯ ಪ್ರಚಾರ್ಯ ಡಾ.ಶಾಲಿನಿ ಹಾಗೂ ಸಿಪಿಸಿಬಿ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಬಾಬು ಉದ್ಘಾಟಿಸಿದರು.

ದಾವಣಗೆರೆ ವಿಭಾಗದ ಹಿರಿಯ ಪ್ರಾದೇಶಿಕ ಪರಿಸರ ಅಧಿಕಾರಿ ರಮೇಶ್‌ ಡಿ ನಾಯಕ್‌, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ತುಮಕೂರು ವಿಭಾಗದ ಪರಿಸರ ಅಧಿಕಾರಿ ಶಿವಮೂರ್ತಿ ಬಿ.ಸಿ ಹಾಗೂ ತುಮಕೂರು ವಿಭಾಗದ ಉಪ ಪರಿಸರ ಅಧಿಕಾರಿ ಪಲ್ಲವಿ ಹೆಚ್.ವಿ ಹಾಗೂ ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ಸಿಇಒ ಡಾ.ಸಂಜೀವ್‌ ಕುಮಾರ್‌, ನರ್ಸಿಂಗ್‌ ವಿಭಾಗದ ಮುಖ್ಯಸ್ಥರಾದ ನಾಗಣ್ಣ ಮುಂತಾದವರಿದ್ದರು.