Sunday, 27th October 2024

ಪ್ರಾದೇಶಿಕತೆ ಬೆಳೆಸಿದರೆ ರಾಷ್ಟ್ರೀಯತೆ ಬೆಳೆಯುತ್ತದೆ: ಪ್ರೊ. ಸುಷ್ಮಾ ಯಾದವ್

ತುಮಕೂರು: ಪ್ರಾದೇಶಿಕತೆ ಬೆಳೆಸಿದರೆ ರಾಷ್ಟ್ರೀಯತೆ ಬೆಳೆಯುತ್ತದೆ ಎಂದು ವಿಶ್ವವಿದ್ಯಾಲಯದ ಧನಸಹಾಯ ಆಯೋಗ ಸಮಿತಿಯ ಸದಸ್ಯ ಪ್ರೊ. ಸುಷ್ಮಾ ಯಾದವ್ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಭವನದಲ್ಲಿ ಜಿಲ್ಲಾ ನಂದಗೋಕುಲ ಯುವಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು ಶಿಕ್ಷಣದಲ್ಲಿ ತುಮ ಕೂರು ಮುಂದಿದೆ, ಯುವಕರ ಕೌಶಲ್ಯಯುಕ್ತ ಶ್ರಮಕ್ಕೆ ಬೆಲೆ ಇದೆ. ಮೊದಲು ಬರು ವುದು ದೇಶ. ದೇಶಕ್ಕೋಸ್ಕರ ಅಭಿವೃದ್ದಿ ಮಾಡಬೇಕು ಕಾಲಕ್ಕೆ ತಕ್ಕಂತೆ ಯುವಜನತೆ ಎಲ್ಲಾ ರೀತಿಯಿಂದಲೂ ಬದಲಾಗಬೇಕು ಎಂದರು.

ಶಾಸಕ ಜ್ಯೋತಿಗಣೇಶ್ ಮಾತನಾಡಿ, ಸಮಾಜಕ್ಕೆ ದಿಕ್ಸೂಚಿಯಾಗುವ ಕರ‍್ಯಕ್ರಮ ಇದಾಗಿದೆ. ರಾಷ್ಟೀಯತೆ ಎಲ್ಲರಿಗೂ ಇರಬೇಕು ಇರುವಂತಹ ಅಧಿಕಾರವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವುದು ನಮ್ಮ ರ‍್ತವ್ಯ ಎಂದು ತಿಳಿಸಿದರು. ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿಕ್ಕಪ್ಪಯ್ಯ ರವರು ವಯಸ್ಸಿನ ಬಗ್ಗೆ ಯೋಚನೆ ಮಾಡಬೇಡಿ ಮನಸ್ಸಿನ ಬಗ್ಗೆ ಯೋಚನೆಮಾಡಿ. ಒಳ್ಳೆಯ ದಾರಿ ಒಳ್ಳೆಯ ನಡೆತೆ ಇರಲಿ ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನಕ್ಕೆ ಹೋಗುವಂತಹವರು ನೀವಾಗುವಿರಿ ಎಂದು ಹೇಳಿದರು.

ಮಾಜಿ ಸಿಂಡಿಕೇಟ್ ಸದಸ್ಯ ಆರ್. ಕೆ. ಶ್ರೀನಿವಾಸ್ ಮಾತನಾಡಿ, ಭಾರತೀಯ ಆಧ್ಯಾತ್ಮ ಪರಂಪರೆ ಮತ್ತು ಯುವಕರ ಆಶಾಕಿರಣ ಯೂತ್ ಐಕಾನ್ ಎಂದೇ ಪ್ರಸಿದ್ದರಾದ ಸ್ವಾಮಿ ವಿವೇಕಾನಂದರೇ ನಮ್ಮೆಲ್ಲರಿಗೂ ಸ್ಪರ‍್ತಿ. ವಿದ್ಯರ‍್ಥಿ ದಿಸೆಯಿಂದ ವಿದ್ಯರ‍್ಥಿ ಪರಿಷತ್ತಿನ ಕರ‍್ಯರ‍್ತನಾಗಿ ವಿದ್ಯರ‍್ಥಿಗಳು ಹಲಾವಾರು ಹೋರಾಟಗಳನ್ನು ಮಾಡಿಕೊಂಡು ಬಂದಿ ದ್ದೇನೆ. ವಿದ್ಯರ‍್ಥಿ ಮತ್ತು ಶಿಕ್ಷಕರ ಸೇವೆ ಮಾಡುವುದಕ್ಕೆ ಸಿಕ್ಕ ಪುಟ್ಟ ಅವಕಾಶ ಈ ಸಿಂಡಿಕೇಟ್ ಸದಸ್ಯ ಸ್ಥಾನ. ನಮಗೆ ಸಿಕ್ಕಂತಹ ಚಿಕ್ಕ ಸಮಯದಲ್ಲಿಯೇ ಸಾಧ್ಯವಾದಷ್ಟು ಕೆಲಸವನ್ನು ಮಾಡಿರುವ ಸಂತೃಪ್ತಿ ಇದೆ. ಈ ಅವಕಾಶವನ್ನು ಕಲ್ಪಿಸಿಕೊಟ್ಟ ನಗರ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ಹಾಗೂ ಅದಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಗಳನ್ನ ತಿಳಿಸಿದರು.

ಕರ‍್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವ ಶಿವಚಿತ್ತಪ್ಪ, ಕರುನಾಡ ವಿಜಯಸೇನೆ ಅಧ್ಯಕ್ಷ ಅರುಣ್ ಕುಮಾರ್, ತುಮಕೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಪರಮಶಿವಯ್ಯ ಉಪಸ್ಥಿತರಿದ್ದರು.