Thursday, 12th December 2024

Yadgir News: ನೇರ ನಡೆ ನುಡಿಯ ಹೃದಯ ಶ್ರೀಮಂತಿಕೆಯ ನಾಯಕ ಮುದ್ನಾಳ-ಹೆಡಗಿಮದ್ರಾ ಶ್ರೀ

ಯಾದಗಿರಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಸಮಾಜ ಬಸವ ಉತ್ಸವ ಸಮಿತಿ, ವೆಂಕಟರೆಡ್ಡಿಗೌಡ ಮುದ್ನಾಳ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಾದಗಿರಿ: ಹಿರಿಯ ರಾಜಕಾರಣಿಯಾಗಿದ್ದ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಬದುಕಿನ ಹೆಚ್ಚುಕಾಲ ಜನ ಸೇವೆಯಲ್ಲಿಯೇ ಕಳೆದರು, ಅವರು ಜೀವನದ ಅತಿಹೆಚ್ಚು ದಿನಗಳ ನ್ಯಾಯ, ನೀತಿ, ಧರ್ಮ ಪರಿಪಾಲನೆ ಹೀಗೆ ಸಾಮಾಜಿಕ ಜೀವನದಲ್ಲಿಯೇ ಕಳೆದರು ಎಂದು ಹೆಡಗಿಮದ್ರಾ ಶ್ರೀ ಶಾಂತಶಿವಯೋಗಿಶ್ವರ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.

ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಸಮಾಜ, ಬಸವ ಉತ್ಸವ ಸಮಿತಿ, ವೆಂಕಟರೆಡ್ಡಿ ಗೌಡ ಮುದ್ನಾಳ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡ ನುಡಿ ನಮನ ಕಾರ್ಯಕ್ರಮದಲ್ಲಿ ಮಾತ ನಾಡಿದರು.

ನಾಟಕ ಮಾಡಿ ಬದುಕುವುದಕ್ಕಿಂತ ನೇರ ದಿಟ್ಟ ನಡೆ ನುಡಿಯಿಂದ ಬದುಕುಬೇಕು ಎಂಬುದು ಅವರ ತತ್ವವಾಗಿತ್ತು, ಜೀವನದುದ್ದಕ್ಕೂ ಕೂಡ ಅವರು ನೇರ ನಡೆ ನುಡಿಯ ಹೃದಯ ಶ್ರೀಮಂತಿಕೆಯ ನಾಯಕರಾಗಿಯೇ ಜೀವನ ನಡೆಸಿದರು ಎಂದು ಹೇಳಿದರು.

ಯಾದಗಿರಿ ಜಿಲ್ಲೆಯಲ್ಲಿ ರಾಜಕೀಯ ಜೀವನದಲ್ಲಿ ಹೆಚ್ಚಿನ ಅಭಿವೃದ್ದಿಗಳನ್ನು ಮಾಡಿದ್ದಾರೆ ಅವರ ಆತ್ಮಕ್ಕೆ ದೇವರು ಶಾತಿ ನೀಡಲಿ ಎಂದು ತಿಳಿಸಿದರು.

ಶಾಸಕ ಚೆನ್ನಾರಡ್ಡಿ ಪಾಟೀಲ ತುನ್ನೂರ ಮಾತನಾಡಿ, ಯಾದಗಿರಿ ಜಿಲ್ಲೆಯಲ್ಲಿ ಅವರು ರಾಜಕೀಯ ಜೀವನದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ, ಸದಾ ಜನರ ಕಾಳಜಿವಹಿಸುವ ಓರ್ವ ನಾಯಕರಾಗಿದ್ದರು ನ್ಯಾಯ, ನೀತಿಯಂತೆ ಬದುಕು ನಡೆಸಿದ ಒಬ್ಬ ಜನ ನಾಯಕರು ವೆಂಕಟರೆಡ್ಡಿಗೌಡ ಮುದ್ನಾಳ ಆಗಿದ್ದರು ಎಂದು ಹೇಳಿದರು.

ದಾಸಬಾಳ ಶ್ರೀ ಮಠದ ಸದ್ಗುರು ವೀರೇಶ್ವರ ಮಹಾಸ್ವಾಮಿಗಳು ಮಾತನಾಡಿ, ವೆಂಕಟರೆಡ್ಡಿ ಗೌಡ ಮುದ್ನಾಳ ಅವರು ಕೇವಲ ಜನ ನಾಯಕರಾಗಿರದೇ ಜನ ಪ್ರೀತಿಯ ನಾಯಕರಾಗಿದ್ದರು, ಜೀವನವಿಡಿ ಮತಕ್ಷೇತ್ರದ ಜನರ ಒಳಿತಿಗಾಗಿ ಹಗಲಿರುಳು ಶ್ರಮಿಸಿದ ಧೀಮಂತ ನಾಯಕರಾಗಿದ್ದರು ಎಂದು ಹೇಳಿದರು.

ಸೊಪ್ಪಿಮಠಡ ಶ್ರಿಗಳಾದ ಚನ್ನಕೇಶವ ಮಹಾಸ್ವಾಮಿಗಳು. ವಿಶ್ವಕರ್ಮ ಏಕದಂಡಗಿ ಮಠದ ಕುಮಾರ ಮಹಾ ಸ್ವಾಮಿಗಳು ಮಾತನಾಡಿದರು.

ಈ ಸಂದರ್ಭದಲ್ಲಿ ವೀರಶೈವ ಸಮಾಜದ ನಗರ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ. ರಾಚಣ್ಣಗೌಡ ಮುದ್ನಾಳ. ಮಹೇಶರೆಡ್ಡಿ ಗೌಡ ಮುದ್ನಾಳ. ಹಣಮಂತರೆಡ್ಡಿ ಗೌಡ ಮುದ್ನಾಳ. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ದಪ್ಪ ಎಸ್ ಹೊಟ್ಟಿ. ಶರಣಪ್ಪಗೌಡ ಮಲ್ಹಾರ. ವೀರಶೈವ ಸಮಾಜದ ಗೌರವ ಅಧ್ಯಕ್ಷ ಎಸ್ ಬಿ ಪಾಟೀಲ. ಸಿ ಎಸ್ ಮಾಲಿಪಾಟೀಲ. ಚನ್ನಬಸರೆಡ್ಡಿ ಗೌಡ ಮುದ್ನಾಳ. ಸೋಮಶೇಖರ್ ಮಣ್ಣೂರ. ಬಸವಂತ್ರಾಯ ಗೌಡ ಮಾಲಿ ಪಾಟೀಲ. ಗೂಂಡುರಾವ ಪಂಚೇತ್ರಿ. ಬಸವರಾಜ ಮೋಟ್ನಳ್ಳಿ. ಆರ್ ಮಹಾದೇವಪ್ಪ ಗೌಡ ಅಬ್ಬೆತುಮಕೂರ. ನಾಗರತ್ನ ಕುಪ್ಪಿ. ನಾಗರತ್ನ ಅನಪೂರ. ಅನ್ನಪೂರ್ಣ ಜವಳಿ ವೀಣಾ ಮೋದಿ. ಸುನೀತಾ ಚವ್ಹಾಣ. ನಾಗೇಂದ್ರ ಜಾಜಿ. ಸಿದ್ದರಾಜ ರೆಡ್ಡಿ ರಾಜಶೇಖರ ಕಿಲ್ಲನಕೇರಿ. ಆರ್ ಮಹಾದೇವಪ್ಪ ಗೌಡ ಅಬ್ಬೆತುಮಕೂರ. ಚೆನ್ನಪ್ಪ ಸಾಹುಕಾರ. ಇತರರು ಇದ್ದರು.

ಇದನ್ನೂ ಓದಿ: Dr CN Manjunath: ಮೈಸೂರು ರಾಜಮನೆತನಕ್ಕೆ ವಿಶೇಷ ಸ್ಥಾನಮಾನ; ಸಂಸದ ಡಾ. ಮಂಜುನಾಥ್ ಹೇಳಿದ್ದೇನು?