Thursday, 12th December 2024

ಕೊಡಗಿನಲ್ಲಿ ಇಂದು ಯದುವೀರ ಚುನಾವಣಾ ಪ್ರಚಾರ ಕಾರ್ಯ

ಡಿಕೇರಿ: ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೊಡಗು ಜಿಲ್ಲೆಯಲ್ಲಿ ಮಾ.22ರಂದು ಚುನಾವಣಾ ಪ್ರಚಾರ ಕಾರ್ಯ ನಡೆಸಲಿದ್ದಾರೆ.

ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ, ಬೆಳಿಗ್ಗೆ 9.30ಕ್ಕೆ ಚೇರಂಬಾಣೆ, ಭಾಗಮಂಡಲ, ಕುಂದಚೇರಿ, ಬೆಟ್ಟಗೇರಿ, ಅಯ್ಯಂಗೇರಿ ಪಂಚಾಯಿತಿ ವ್ಯಾಪ್ತಿಯ ಸಭೆಯನ್ನು ಚೇರಂಬಾಣೆಯ ವಿಎಸ್‌ಎಸ್‌ಎನ್‌ ಸಭಾಂಗಣದಲ್ಲಿ ನಡೆಸಲಿದ್ದಾರೆ.

ನಂತರ, ಸಂಪಾಜೆ, ಚೆಂಬು, ಪೆರಾಜೆ, ಮದೆನಾಡು ‍ಪಂಚಾಯಿತಿ ವ್ಯಾಪ್ತಿಯ ಸಭೆಯನ್ನು ಸಂಪಾಜೆಯ ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ, ಮಧ್ಯಾಹ್ನ 1 ಗಂಟೆಗೆ ಮೂರ್ನಾಡು, ಮರಗೋಡು, ಹೊಸ್ಕೇರಿ, ಹಾಕತ್ತೂರು, ಹೊದ್ದೂರು, ಪಾರಾಣೆ, ಚೆಯ್ಯಂಡಾಣೆ, ಮೇಕೇರಿ ವ್ಯಾಪ್ತಿಯ ಸಭೆಯನ್ನು ಮೂರ್ನಾಡು ವಿನ ಎಪಿಸಿಎಂಎಸ್ ಹಾಲ್‌ನಲ್ಲಿ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.