ಚಿಕ್ಕಬಳ್ಳಾಪುರ: ರೈತ ಸಂಘಗಳ ಉದ್ದೇಶ ರೈತಾಪಿ ವರ್ಗದ ಹಿತಕಾಯುವುದಾಗಬೇಕೇ ವಿನಃ ಅಧಿಕಾರಿಗಳ ಮರ್ಜಿಗಾಗಿ ಕಾಯು ವುದಾಗಲಿ, ವಸೂಲಿ ರಾಜಕಾರಣ ಮಾಡುವುದಾಗಲಿ ಆಗಬಾರದು. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಘನ ಉದ್ದೇವನ್ನಿಟ್ಟು ಕೊಂಡು ಕರ್ನಾಟಕ ಗಡಿನಾಡು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ರಾಜ್ಯದಲ್ಲಿಯೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬಂದಿದೆ.
ಪ್ರಾರಂಭದಿ0ದಲೇ ಹಳ್ಳಿಗಳಲ್ಲಿ ಗ್ರಾಮಸಭೆಗಳನ್ನು ನಡೆಸಿ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆಸಿ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತಿದ್ದೇವೆ ಎಂದು ಜಿಲ್ಲಾಧ್ಯಕ್ಷ ಯಣ್ಣೂರು ಬಸವರಾಜ್ ತಿಳಿಸಿದರು. ಚಿಕ್ಕಬಳ್ಳಾಪುರ ತಾಲೂಕು ಮಂಡಿಕಲ್ಲು ಹೋಬಳಿ ಯಲ್ಲಿ ಭಾನುವಾರ ನಡೆಸಿದ ಹಂತದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರೊ.ನಂಜು0ಡಸ್ವಾಮಿ ಅವರು ರೈತ ಸಂಘವನ್ನು ಪ್ರಾರಂಭಿಸಿದ ದಿನಗಳಲ್ಲಿ ಪ್ರತಿಯೊಂದು ಊರಿನ ಮುಂದೆ ನಾಮಫಲಕ ಹಾಕಿ “ಅಧಿಕಾರಿಗಳು ಗ್ರಾಮವನ್ನು ಪ್ರವೇಶಿಸಬೇಕಾದರೆ ರೈತ ಸಂಘದ ಅನುಮತಿ ಪಡೆದಿರಬೇಕು” ಎಂದು ಬರೆಸಿದ್ದರು. ಇದರ ಉದ್ದೇಶವನ್ನು ರೈತಸಂಘದ ಮುಖಂಡರು ಅರಿಯಬೇಕು.
ರೈತ ಸರ್ವತಂತ್ರ ಸ್ವತಂತ್ರ. ಅವರ ನಿಸ್ವಾರ್ಥ ಕಾಯಕದ ಮೇಲೆ ದೇಶದ ಆರ್ಥಿಕತೆ ನಿಂತಿದೆ. ಇ0ತಹ ರೈತಾಪಿ ವರ್ಗವು ಬ್ಯಾಂಕುಗಳ ಮೂಲಕ, ಸಾಲದ ಮೂಲಕ ಹಿಂಡಿಹಿಪ್ಪೆ ಮಾಡುತ್ತಿದ್ದ ಕಾಲದಲ್ಲಿ, ಪೊಲೀಸರು ಅಮಾನುಷವಾಗಿ ವರ್ತಿಸುತ್ತಿದ್ದ ಕಾಲದಲ್ಲಿ ಅವರಲ್ಲಿ ಚೈತನ್ಯ ತುಂಬುವ ಕಾರಣಕ್ಕಾಗಿಯೇ ನಂಜುAಡಸ್ವಾಮಿ ಹೀಗೆ ಬರೆಸಿದ್ದರು.ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ” ರೈತ ಸಾಲಗಾರನಲ್ಲ, ಸರಕಾ ರವೇ ರೈತನಿಗೆ ಬಾಕಿದಾರ” ಎಂದು ನಾಮಫಲಕ ಹಾಕುವ ಮೂಲಕ, ಹೋರಾಟಗಳಲ್ಲಿ ಘೋಷಣೆ ಕೂಗುವ ಮೂಲಕ ಶೋಷಕ ವ್ಯವಸ್ಥೆಯಲ್ಲಿ ನಡುಕ ಹುಟ್ಟಿಸಿದ್ದರು.ಅವರ ಬದುಕಿನ ಸಂದೇಶದAತೆ ನಮ್ಮ ಸಂಘ ನಡೆಯಲು ಬಯಸುತ್ತದೆ ಎಂದರು.
ಕಾರ್ಯದರ್ಶಿ ಟಿ. ಮುನಿರಾಜು ಮಾತನಾಡಿ ನಮ್ಮ ಸಂಘವು ಕರ್ನಾಟಕ ಸರಕಾರ ಸಂಘಗಳ ಅಡಿಯಲ್ಲಿ ನೋಂದಾಯಿಸ ಲ್ಪಟ್ಟರುವ ರೈತ ಸಂಘವಾಗಿದೆ. ಜಿಲ್ಲೆಯ ೮ ತಾಲೂಕುಗಳಲ್ಲಿ ಶಾಖೆಗಳನ್ನು ತೆರೆಯುವ ಉದ್ದೇಶವಿದ್ದು ಮಂಡಿಕಲ್ ಹೋಬಳಿಯಲ್ಲಿ ಸದಸ್ಯತ್ವ ಅಭಿಯಾನ ಮತ್ತು ಪೂರ್ವಭಾವಿ ಸಭೆ ನಡೆಸಲಾಗಿದೆ.ರೈತಾಪಿ ವರ್ಗದಿಂದ ಉತ್ತಮ ಸ್ಪಂಧನೆ ವ್ಯಕ್ತವಾಗುತ್ತಿದ್ದು ಸ್ವಯಿಚ್ಚೆಯಿಂದ ರೈತರು ಮುಂದೆ ಬಂದು ಸಂಘಕ್ಕೆ ಸದಸ್ಯರಾಗಲು ಒಲುವು ತೋರುತ್ತಿದ್ದಾರೆ.ರಾಜ್ಯದಲ್ಲಿ ಮಾದರಿ ಸಂಘವಾಗಿ ಗುರುತಿಸಿಕೊಳ್ಳಲು ಏನೇನು ಮಾಡಬೇಕೋ ಅದನ್ನು ಸಂಘದ ನಿಯಮಗಳ ಅಡಿಯಲ್ಲಿ ಮಾಡಲು ಸಿದ್ದರಿದ್ದೇವೆ ಎಂದರು.
ಉಪಾಧ್ಯಕ್ಷ ಶ್ರೀನಿವಾಸಲು ಮಾತನಾಡಿ ಕರ್ನಾಟಕ ಗಡಿನಾಡು ರೈತಸಂಘವು ತನ್ನದೇ ಆದ ಬದ್ದತೆಯನ್ನುಳ್ಳ ಸಂಘವಾಗಿದೆ. ರೈತಸ0ಘ, ರೈತ ಮುಖಂಡರು ಶ್ರಮಜೀವಿಗಳ ಕಷ್ಟಕ್ಕೆ ಮಿಡಿಯುವ ಕೆಲಸ ಮಾಡುತ್ತಾರೆಯೇ ವಿನಃ ದಲ್ಲಾಳಿಯಾಗಿ,ರೈತರಿಗೆ ವಂಚನೆ ಮಾಡುವ ಮೋಸಗಾರರಾಗಿ ಗುರುತಿಸಿಕೊಳ್ಳಲು ಹಿಂಜರಿಯುವ ಗುಣವುಳ್ಳವರಾಗಿದ್ದಾರೆ.ಗಡಿನಾಡಿನ ರೈತರ ಉನ್ನತಿಗಾಗಿ ಶ್ರಮಿಸುವ ಏಕೈಕ ಅಜೆಂಡಾ ನಮ್ಮದಾಗಿದೆ ಎಂದರು.
ತಾಲೂಕು ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ ರೈತರ ಹಿತಕಾಪಾಡಬೇಕಾದರೆ ಸಮಾನ ಮನಸ್ಕರೆಲ್ಲರೂ ಸಂಘಟನೆಯ ಅಡಿಯಲ್ಲಿ ಒಂದುಗೂಡಬೇಕು.ತನ್ಮೂಲಕ ಅಧಿಕಾರಿಗಳಿಗೆ ನಮ್ಮ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಅವರಿಂದ ಪರಿಹಾರ ಕಂಡುಕೊಳ್ಳಬೇಕು.ಈ ಕೆಲಸವನ್ನು ಗಡಿನಾಡು ರೈತಸಂಘ ಮಾಡಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಜಿ.ವಿ.ರಾಜಣ್ಣ,ಉಪ್ಪಾರ ಸಂಘದ ಉಪಾಧ್ಯಕ್ಷ ವೆಂಕಟೇಶ್,ಸAಘದ ಪದಾಧಿಕಾರಿಗಳಾದ ಶಾಂತಮ್ಮ, ಚಂದ್ರಪ್ಪ, ಅಶ್ವತ್ಥನಾರಾಯಣಗೌಡ, ಆನಂದ್, ಮಂಡಿಕಲ್ಲು ಹೋಬಳಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ರೈತ ಮುಖಂಡರು ಭಾಗವಹಿಸಿದ್ದರು.