ಇಂಡಿ: ಮಧ್ಯಪಾನ ಚಟದಿಂದ ಬಡ ಮಧ್ಯಮ ಕುಟುಂಬಗಳ ಜೀವ ಹಳಾಗುತಿರುವುದು ಸರಕಾರದ ಗಮನಕ್ಕೆ ಬಂದಿದೆಯೇ ಎ0ದು ಶಾಸಕ ಯಶವಂತರಾಯಗೌಡ ಪಾಟೀಲ ಬೆಳಗಾವಿ ಸುವರ್ಣಸೌಧ ಅಧಿವೇಶನ ದಲ್ಲಿ ಚುಕ್ಕೆಗುರತಿಲ್ಲದ ಪ್ರಶ್ನೆ ಕೇಳಿದರು.
ಈಗಾಗಲೇ ಗ್ರಾಮೀಣ ಭಾಗದಲ್ಲಿ ಮಹಿಳೆಯರು ಮಧ್ಯ ನಿಷೇದ ಮಾಡುವಂತೆ ಒತ್ತಾಯಿಸಿ ಸಾಕಷ್ಟು ಹೋರಾಟಗಳ ನಡೆಸಿದ್ದಾರೆ. ಬೇರೆ ಬೇರೆ ರಾಜ್ಯದಲ್ಲಿ ಮಧ್ಯನಿಷೇದ ಮಾಡುವ ಆಸಕ್ತಿ ಸರಕಾರಕ್ಕೆ ಇದೆಯೇ ? ಇದರ ಬಗ್ಗೆ ಸರಕಾರದ ಸಪಷ್ಠ ನಿಲುವೇನು ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಅಬಕಾರಿ ಸಚಿವ ಸರಕಾರದ ವತಿಯಿಂದ ಸ್ಥಾಪಿತವಾ ಗಿರುವ ಮಧ್ಯದ ಅಂಗಡಿ ಗಳಿ0ದ ಗುಣಮಟ್ಟದ ಮಧ್ಯ ಬಯಸುವ ಪಾನಿಕರಿಗೆ ಉತ್ತಮ ಗುಣಮಟ್ಟದ ಮಧ್ಯದೋರೆಯುವಂತಾಗಬೇಕು.
ಇನ್ನು ಮಧ್ಯಪಾನದಿಂದ ಬಡ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಸುಧಾರಿಸಲು ಮಧ್ಯಪಾನ ಸಂಯಮ ಮಂಡಳಿಯ ವತಿಯಿಂದ ಮಧ್ಯಪಾನದಿಂದಾಗುವ ಅನಾಹುತ ಬಗ್ಗೆ ಕಮ್ಮಟಗಳನ್ನು ಏರ್ಪಡಿಸಿ ಜಾಗೃತಿ ಮೂಡಿಸಲಾಗುತ್ತದೆ.
ಮಧ್ಯಪಾನ ನಿಷೇದ ಮಾಡುವದರಿಂದ ಪಾನಿಕರು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಕಳ್ಳಬಟ್ಟಿ ಕಲಬೇರಿಕೆ ಮಧ್ಯ ಪ್ರೇಂಚ್ ಪಾಲೀಸ್ ಹಾಗ ಇತರೆ ಮಾದಕ ಪದಾರ್ಥಗಳು ಸೇವಿಸಲು ಆರಂಭಿಸಿದಲ್ಲಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬಿರುತ್ತದೆ. ಮಧ್ಯ ತಯಾರಿಕೆ ಅಕ್ರಮ ಚಟುವಟಿಕೆಗಳು ಜನ ಜೀವನಕ್ಕೆ ಅಪಾಯಕಾರಿ.
ಅಕ್ರಮ ಮಧ್ಯ ಚಟುವಟಿಕೆ ಜೀವನಕ್ಕೆ ಅಪಾಯಕಾರಿ .ಮಧ್ಯಪಾನ ನಿಷೇದಿಸುವುದರಿಂದ ರಾಜ್ಯದ ಬೋಕ್ಕಸ್ ನೇರವಾಗಿ ಪರಿಣಾ ಬಿರುತ್ತದೆ. ಇನ್ನು ಬೇರೆ ಬೇರೆ ರಾಜ್ಯದಂತೆ ನಮ್ಮ ರಾಜ್ಯದಲ್ಲಿ ಮಧ್ಯ ನಿಷೇದ ಬಗ್ಗೆ ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಅಬಕಾರಿ ಸಚಿವ ಸದನದಲ್ಲಿ ಶಾಸಕ ಪಾಟೀಲರ ಪ್ರಶ್ನೆಗೆ ಉತ್ತರಿಸಿದರು.