Thursday, 12th December 2024

ಇಂದು ಯತೀಶ್ವರ ಶ್ರೀಗಳ ಪುಣ್ಯಸ್ಮರಣೆ

ಚಿಕ್ಕನಾಯಕನಹಳ್ಳಿ: ಲಿಂಗೈಕ್ಯ ಶ್ರೀಶ್ರೀ. ಡಾ.ಯತೀಶ್ವರ ಶಿವಾಚಾರ್ಯಸ್ವಾಮೀಜಿಯವರ ಮೊದಲ ವರ್ಷದ ಪುಣ್ಯ ಸ್ಮರಣೆ ಹಾಗು ಧಾರ್ಮಿಕ ಸಮಾರಂಭವು ಸೆ.೧೪ ಬುಧವಾರ ಕುಪ್ಪೂರು ಗದ್ದಿಗೆ ಮಠದಲ್ಲಿ ನಡೆಯಲಿದೆ.

ತಾಲ್ಲೂಕಿನ ಕುಪ್ಪೂರು ಗದ್ದಿಗೆ ಮಠದ ಶ್ರೀಗಳಾದ ಡಾ.ಯತೀಶ್ವರ ಶಿವಾಚಾರ್ಯರು ಸೆ.೨೫-೨೦೨೧ರಲ್ಲಿ ಅಕಾಲಿಕದಿಂದ ನಿಧನ ಹೊಂದ್ದಿದ್ದರು. ತಾಲ್ಲೂಕಿನ ಹೇಮಾವತಿ ನೀರಾವರಿ ಹೋರಟದಲ್ಲಿ ಪ್ರಮುಖರಾಗಿ ಅಲ್ಲದೆ ರೈತ ಪರ ಚಳುವಳಿ ಹಾಗು ಪ್ರತಿಭಟಣೆಯಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಧಾರ್ಮಿಕ,ಸಾಂಸ್ಕೃತಿಕ,ಸಾಮಾಜಿಕವಾಗಿ ತಮ್ಮದೇ ಆದ ಸೇವೆಯಲ್ಲಿ ಶ್ರೀಗಳು ಸಲ್ಲಿಸಿದ್ದರು.

ಶ್ರೀಗಳ ಪುಣ್ಯ ಸ್ಮರಣೆಯ ಅಂಗವಾಗಿ ಕುಪ್ಪೂರು ಗದ್ದಿಗೆ ಶ್ರೀಮರುಳಸಿದ್ಧೇಶ್ವರಸ್ವಾಮಿ ಮಠದಲ್ಲಿ ಬೆಳಿಗ್ಗೆ ೭.೩೦ಕ್ಕೆ ಪೂಜೆ ನಡೆಯಲಿದೆ. ಬೆಳಿಗ್ಗೆ ೧೧.೩೦ಕ್ಕೆ ಧಾರ್ಮಿಕ ಸಮಾರಂಭದಲ್ಲಿ ಹರಗುರು ಚರಮೂರ್ತಿಗಳು ದಿವ್ಯ ಸಾನಿದ್ಯ ವಹಿಸಿ ಜನಪ್ರತಿನಿಧಿ ಗಳು ಭಾಗವಹಿಸಲಿದ್ದಾರೆ ಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ ಬೇಕೆಂದು ಮಠದ ಮುಖ್ಯಸ್ಥರಾದ ವಾಗೀಶ್ ಪಂಡಿತಾರಾದ್ಯರು ಹಾಗು ಸದ್ಭಕ್ತ ಮಂಡಳಿಯಿAದ ಸ್ವಾಗತ ಕೋರಿದ್ದಾರೆ.