ವಿಜಯಪುರ : ಅಗ್ನಿಪಥ್ ವಿರೋಧಿಸುವವರು ದೇಶದ್ರೋಹಿಗಳು, ಅವರೇ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದ್ದಾರೆ ಅಂತಹವ ರಿಂದಲೇ ದೇಶಕ್ಕೆ ತೊಂದರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಹಾಗೂ ಎಡಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2047 ಈ ದೇಶವನ್ನು ಮುಸ್ಲೀಂ ದೇಶವನ್ನಾಗಿ ಮಾಡುವ ಸಂಚು ಬಯಲಾಗಿದೆ, ಮಾಜಿ ಉಪರಾಷ್ಟ್ರಪತಿಯವರ ಬಣ್ಣವೂ ಬಯಲಾಗಿದೆ. ನರೇಂದ್ರ ಮೋದಿಯವರು ಪ್ರಧಾನಿಯಾಗಿ ರುವವರೆಗೆ ಈ ದೇಶಕ್ಕೆ ಏನೂ ಅಪಾಯವಿಲ್ಲ, ಯಾರಿಂದಲೂ ಏನು ಮಾಡಲು ಸಾಧ್ಯವಿಲ್ಲ. ಇದನ್ನು ದೇಶದ್ರೋಹಿಗಳು ಅರ್ಥಮಾಡಿಕೊಳ್ಳಬೇಕು ಎಂದು ಹರಿಹಾಯ್ದರು.
ಈ ದೇಶಕ್ಕೆ ಪಿ.ಎಫ್.ಐ, ಎಸ್.ಡಿ.ಪಿ.ಐ ನಂತಹ ಸಂಘಟನೆಗಳು ಬೆದರಿಕೆ ಒಡ್ಡುತ್ತಿವೆ, ನಾವು ಅದಕ್ಕೆ ಹೆದರುವ ಪ್ರಮೇಯವೇ ಇಲ್ಲ, ತಕ್ಕಪಾಠ ಕಲಿಸಲು ನಾವು ತಯಾರಾಗಿ ದ್ದವೇ, ಇಂತಹ ದೇಶದ್ರೋಹಿ ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದರು.
ಇದೇವೇಳೆ ತಮ್ಮ ವಿರುದ್ಧ ಆರೋಪಿಸುತ್ತಿರುವ ಜಿಲ್ಲೆಯ ಕೆಲ ಶಾಸಕರ ವಿರುದ್ಧ ಹರಿಹಾಯ್ದ ಅವರು, ಜಿಲ್ಲೆಯಲ್ಲಿ ಕ್ರಲವು ಬ್ಲ್ಯಾಕ್ ಮೇಲ್ ತಂಡಗಳಿದ್ದಾವೆ, ಅವರಿಗೆ ಬ್ಲ್ಯಾಕ್ ಮೇಲ್ ಮಾಡುವುದೇ ಕೆಲಸ. ಚುನಾವಣೆ ಬಂದ ತಕ್ಷಣ ಈ ಗುಂಪು ಎಚ್ಚರ ವಾಗುತ್ತೆ, ಕ್ಷೇತ್ರ ಬದಲಾವಣೆ ಮಾತುಗಳನ್ನು ಆಡ್ತಾರೆ ಅಂತ ಕೆಲ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಪಕ್ಷದ ಸಭೆಗೆ ಹೋಗಿಲ್ಲ ಎನ್ನುವುದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ನನಗೆ ಆ ಸಭೆಗೆ ಆಹ್ವಾನವಿಲ್ಲ, ಕರೆಯದೆ ಬರುವವನ ಕೆರದಿಂದ ಹೋದೆ ಅಂದ ಸರ್ವಜ್ಞ ಅಂತ ಸರ್ವಜ್ಞನ ತ್ರಿಪದಿ ಹೇಳಿದರು.
ನಾನು ಸತ್ಯ ಹೇಳುತ್ತಿರುವುದರಿಂದಲೇ, ನನ್ನ ಮೇಲೆ ಹೈಕಮಾಂಡ್ ಕ್ರಮ ಕೈಗೊಳ್ಳುತ್ತಿಲ್ಲ. ನನ್ನನ್ನ ಜಿಲ್ಲೆಯಲ್ಲಿ ಕೆಲವರು ರಾಜಕೀಯವಾಗಿ ತುಳಿಯಲು ಪ್ರಯತ್ನಿಸಿದರು, ನನ್ನನ್ನು ಯಾರೂ ಮುಗಿಸಲು ಸಾಧ್ಯವಿಲ್ಲ, ನನಗೆ ದೇವರ ಶ್ರೀರಕ್ಷೆ ಇದೆ ಅಂತ ಹೇಳಿದರು. ಬಿಜೆಪಿ ಹಿಂದೂ ಪಕ್ಷ ಹಿಂದೂಗಳಿಗೆ ಪರಿಹಾರ ನೀಡಬೇಕು, ಬೆಣ್ಣಿಗೆ ಚೂರಿ ಹಾಕುವವರಿಗೆ ಅಲ್ಲ. ನಾನು ಹಿಂದೂ, ಇದ್ರಲ್ಲಿ ಯಾರ ಅಂಜಿಕೆಯೂ ಇಲ್ಲ ಎಂದು ಗುಡುಗಿದರು. ಇದೇವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮುಸ್ಲಿಂ ಮಹಿಳೆಯೊಬ್ಬರ ಪರಿಹಾರಣ ಹಣ ವಾಪಸ್ ಎಸೆದಿದ್ದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಅವರ ಸಂಬಂಧಿಕರು ಏನು ಮಾಡಿದ್ರು ನಡೆಯುತ್ತೆ ಅಂತ ನಗೆಚಾಟಿಕೆ ಹಾರಿಸಿದ್ರು.