Friday, 22nd November 2024

YeshwantRayaGowda Patil: ಇತರೆ ರಾಜ್ಯಗಳಿಗೆ ವಿದ್ಯುತ್ ಕೊಡುವಷ್ಟರ ಮಟ್ಟಿಗೆ ಸಶಕ್ತ ಶಾಲಿಯಾಗಿದೆ- ಶಾಸಕ ಅಂದಾಜು ಸಮಿತಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ

ಇಂಡಿ: ಹಿಂದಿನ ,ಇಂದಿನ ಸರಕಾರಗಳು ರೈತಾಪಿ ವರ್ಗ ಹಾಗೂ ಬಡವರ, ಜನಸಾಮಾನ್ಯರ ಮೂಲಭೂತ ಸೌಲಭ್ಯಗಳು ಒದಗಿಸುವ ಪ್ರಮಾಣಿವಾಗಿ ಕೆಲಸ ಮಾಡಿವೆ. ಈ ಹಿಂದೆ ವಿದ್ಯುತ ಬೇರೆ ರಾಜ್ಯಗಳಿಂದ ಖರೀದಿಸುವ ಪರಸ್ಥಿತಿ ಇತ್ತು ಆದರೆ ಕರ್ನಾಟಕ ರಾಜ್ಯ ಸ್ವಾವಲಂಭನೆಯಾಗಿ ಇತರೆ ರಾಜ್ಯಗಳಿಗೆ ವಿದ್ಯುತ ಕೊಡುವಷ್ಟರ ಮಟ್ಟಿಗೆ ಸಶಕ್ತ ಶಾಲಿಯಾಗಿದೆ ಎಂದು ಶಾಸಕ ಹಾಗೂ ಅಂದಾಜು ಸಮಿತಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.

ಕರ್ನಾಟಕ ವಿದ್ಯುತ ಪ್ರಸರಣ ನಿಗಮದ ಇಂಡಿ ತಾಲೂಕಿನ ನಾದ ಗ್ರಾಮದಲ್ಲಿ ನಿರ್ಮಿಸಲಾದ ಎಂ,.ವ್ಹಿ ಎ .೧೧೦/೧೧ ಕೆ.ವ್ಹಿ ವಿದ್ಯುತ ವಿತರಣಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯ ಸರಕಾರದ ಇಂಧನ ಇಲಾಖೆಯು ಸಮಗ್ರ ಗ್ರಾಮೀಣ ನಗರ ಕೃಗಾರಿಕೆ ಯಶಸ್ವೀಯಾಗಿ ವಿದ್ಯುತ ಪೂರೈಸಲು ಅನನ್ಯ ಕೊಡುಗೆ ನೀಡಿದೆ ಇದಲ್ಲದೆ ವಿದ್ಯತ ಸ್ವಾವಲಂಬನೆ ಸಾಧಿಸಲು ಹೈಡ್ರೋ ಇಲೇಕ್ಟಟ್ರೀಕ್ ಪವರ ಮತ್ತು ವಿಂಡ್ ಪವರ್ ಬಳಸಿಕೊಳ್ಳ ಲಾಗುತ್ತಿದೆ. ಕೇಂದ್ರ ಮಂತ್ರಿ ಸುಶೀಲಕುಮಾರ ಸಿಂಧೆ ಕಾಲದಲ್ಲಿ ಈ ಭಾಗದ ವಿದ್ಯುತ ಸಮಸ್ಯ ನಿವಾರಿಸಲು ಸಹಕಾರ ನೀಡಿದ್ದಾರೆ.

ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆಗಳ ಮೂಲಕ ವಿದ್ಯುತ ಉತ್ಪಾದಿಸಲಾಗುತ್ತಿದೆ. ಬೇಡಿಕೆ ತಕ್ಕಂತೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ.‌ ವಿದ್ಯುತ್ ಇಲಾಖೆಯ ಅಧಿಕಾರಿ ಗೌರವ ಗುಪ್ತಾ ,ಕುಮಾರ ನಾಯಕ ಪಂಕಜ‌ ಕುಮಾರ ನಾಯ್ಕ ಜಾವೇದ ಅಕ್ತಾರ ಸೇರಿದಂತೆ ಹಿರಿಯ ಅಧಿಕಾರಗಳು ಕರ್ನಾಟಕ ವಿದ್ಯುತ ಒದಗಿಸಲು ಶ್ರಮಿಸಿದ್ದಾರೆ.

ಈ ಮುಂಚೆ ಈಭಾಗ ಕತ್ತಲೆಯಿಂದ ನರಳುವಂತಾಗಿತ್ತು. ಸಿ.ಎಂ ಸಿದ್ದರಾಮಯ್ಯನವರ ಸಹಕಾರದಿಂದ ಹಾಗೂ ವಿದ್ಯುತ ಸಚಿವ ಡಿ.ಕೆ ಶಿವುಕುಮಾರ ಇಂದಿನ ಸಚಿವ ಕೆ .ಜೆ ಜಾರ್ಜ ನಮ್ಮ ಭಾಗದ ರೈತರ ಮತ್ತು ಜನರ ವಿದ್ಯುತ ಸಮಸ್ಯಗಳನ್ನು ಆಲಿಸಿ ವಿದ್ಯುತ ಸ್ಥಾವರ ಸ್ಥಾಪಿಸಲು ಅನುಧಾನ ನೀಡಿದ್ದಾರೆ ಇವರನ್ನು ಹೃದಯ ತುಂಬಿ ಅಂಭಿನAದನೆ ಸಲ್ಲಿಸುತ್ತೇನೆ. ರೈತರ ಪಂಪಸೆಟ್‌ಗಳಿಗೆ ಕರ್ನಾಟಕ ಸರಕಾರ ಪ್ರತಿನಿತ್ಯ ಹಗಲು ಹೊತ್ತಿನಲ್ಲಿ ೭ ಗಂಟೆ ವಿದ್ಯುತ ಸರಬರಾಜು ಮಾಡುವ ಗುರಿ ಹೊಂದಲಾಗಿದೆ.

ಈ ಭಾಗದ ಸಮಗ್ರ ಅಭಿವೃದ್ದಿಗೆ ೪-೬ ಸಾವಿರ ಕೋಟಿ ಅನುಧಾನ ಕಾಂಗ್ರೆಸ್ ಸರಕಾರ ನನ್ನ ಮತಕ್ಷೇತ್ರಕ್ಕೆ ನೀಡಿದೆ. ಗಡಿ ಭಾಗ ಇಂಡಿ ಕ್ರೈಂ ತುಂಬಿತ್ತು ನಾನು ಶಾಸಕನಾದ ನಂತರ ನ್ಯಾಯ ,ನೀತಿ, ಧರ್ಮದ ತಳಹದಿಯ ಮೇಲೆ ರಾಜಕಾರಣ ಮಾಡಿ ಸಮಸಮಾಜ ನಿರ್ಮಾಣ ಮಾಡುವಲ್ಲಿ ಸಮಾಜಿಕ ನ್ಯಾಯ ಕಾಪಾಡಿದ್ದೇನೆ. ತಾಲೂಕಿನ ಬೈರುಣಗಿ,ನಿಂಬಾಳ, ಹಡಲಸಂಗ, ಇನಾಂ ಶಿರೂಗೂರ, ಅಗಸನಾಳ ವಿದ್ಯುತ ಪ್ರಸರಣಾ ಕೇಂದ್ರ ಸ್ಥಾಪಿಸಲಾಗು ವುದು. ವಿದ್ಯುತ್ಪ್ರಸರಣ ಕೇಂದ್ರ ಸ್ಥಾಪಿಸುವದರಿಂದ ರೈತರ ಭಾಗ್ಯದ ಬಾಗಿಲು ತೆರೆದಿದೆ ಎಂದರು.

ಮುಖ್ಯ ಅಭಿಯಂತರ ಗುರುನಾಥ ಗೋಟ್ಯಾಳ ಪ್ರಸ್ತಾವಿಕ ಮಾತನಾಡಿದರು. 

ಸೆ, ೯ ರಂದು ಸಂಸದ ಇಂಡಿ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಮುರುಮದಿಂದ ವಿಜಯಪೂರಕ್ಕೆ ೯೮೪ ಕೋಟಿ ರೂ ವೆಚ್ಚದ ಕಾಮಗಾರಿ ಭೂಮಿ ಪೂಜೆ ಮಾಡಿದ್ದುಆದರೆ ಈ ಕಾಮಗಾರಿಯನ್ನು ಫೆ,೨೪ ರಂದು ಬೆಳಗಾವಿಯಲ್ಲಿ ಕೇಂದ್ರ ಸಚಿವ ನೀತಿನ ಗಡ್ಕರಿ ಈಗಾಗಲೆ ಉದ್ಘಾಟಿಸಿದ್ದಾರೆ. ಪುನ್ ಅದೇ ಕಾಮಗಾರಿಯನ್ನು ಸಂಸದ ರಮೇಶ ಜಿಗಜಿಣಗಿ ಉದ್ಘಾಟಿಸಿದ್ದು ಸರಿಯಾದ ಕ್ರಮವೇ ಎಂದು ಪ್ರಶ್ನಿಸಿದರು.

ತಾಲೂಕಿನ ಶ್ರೀರೇವಣಸಿದ್ದೇಶ್ವರ ಯಾತ ನೀರಾವರಿ ಯೋಜನೆ ಬಿಜೆಪಿ ಸರಕಾರ ಚಾಲನೆ ನೀಡಿದ್ದು ಆದರೆ ೩ ಸಾವಿರ ಕೋಟಿ ಅನುಧಾನ ಘೋಷಣೆ ಮಾಡಿ ಕಾಮಗಾರಿ ನಡೆಯುತ್ತಿದ್ದು ಬಿಜೆಪಿ ಸರಕಾರದ ಕಾಲದಲ್ಲಿನ ಅನುಧಾನ ಎಷ್ಟು ? ಇಂದಿನ ಕಾಂಗ್ರೇಸ್ ನೀರಾವರಿಗಾಗಿ ನೀಡಿದ ಅನುಧಾನ ಮುಂದಿನ ದಿನಗಳಲ್ಲಿ ಲೆಕ್ಕ ಸಾರ್ವಜನಿಕವಾಗಿ ಬೈರಂಗಪಡಿಸುತ್ತೇನೆ.

ಇನ್ನು ಚುನಾವಣೆ ಮುಂದಿದೆ ಪುರಸಭೆ ಸದಸ್ಯರ ಸಂಖ್ಯಾಬಲ ಬಿಜೆಪಿ ೧೧ ಸಂಸದ ೧ ಜೆಡಿಎಸ್ ೨ ,ಕಾಂಗ್ರೆಸ್ ೮ ,ಪಕ್ಷೇತರ ೦೧, ಬಿಜೆಪಿಗೆ ೧೪ ಇದ್ದರೂ ಕೂಡಾ ನಿಮ್ಮಿಂದ ಅಧಿಕಾರ ಹಿಡಿಯಕ್ಕಾಗಲಿಲ್ಲ ನಿಮ್ಮಲ್ಲಿ ಯಾವ ಪುರುಷಾರ್ಥ ಇದೆ. ಚುನಾವಣೆ ಹೇಗೆ ಗೆಲ್ಲಬೇಕು ಎಂಬುದು ನೀವು ಇನ್ನು ಕಲಿಯಬೇಕಾಗಿದೆ. ಚಕ್ರವ್ಯೋಹ ಹೇಗೆ ಭೇಧಿಸಬೇಕು ಎಂಬುದು ನನಗೆ ಗೊತ್ತು ೪೦ ವರ್ಷ ರಾಜಕಾರಣ ಮಾಡಿ ಪಟ್ಟಣದಲ್ಲಿ ಬಡಮಕ್ಕಳಿಗೆ ಒಂದು ಪಿಯುಸಿ ಕಾಲೇಜ ತೆರೆಯಲ್ಲಿಲ್ಲ ನಾಚಿಕೆಯಾಗಬೇಕು- ಶಾಸಕ ಯಶವಂತರಾಯಗೌಡ ಪಾಟೀಲ ಕಾರ್ಯ ಕ್ರಮದ ದಿವ್ಯ ಸಾನಿಧ್ಯ ಮದ್ದಾನೆ ಮಹಾರಾಜ ವಹಿಸಿದರು.

ಮುಖ್ಯ ಅಭಿಯಂತರ ಗುರುನಾಥ ಗೋಟ್ಯಾಳ, ಅಭಿಯಂತರ ಸಿದ್ದಪ್ಪ ಬಿಂಜಗೇರಿ , ಗ್ರಾಮ ಪಂ ಅಧ್ಯಕ್ಷ ಸಿದ್ದರಾಯ ಐರೋಡಗಿ, ಧಾನಮ್ಮಾ ಕುಂಬಾರ, ಅಭಿಯಂತರುಗಳಾದ ರಮೇಶ ಪವಾರ, ಜಗದೀಶ ಜಾಧವ ,ಕಾಶೀನಾಥ ಹಿರೇಮಠ, ಸುನಂದಾ ಜಂಬಗಿ, ಹೆಸ್ಕಾಂ ಅಧಿಕಾರಿ ಎಸ್ .ಆರ್ ಮೆಡೇದಾರ, ರಾಜೇಶ ಪಾಟೀಲ.ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೊಡ, ಉಪಾಧ್ಯಕ್ಷ ಜಹಾಂಗೀರ ಸೌದಾಗರ,ಕಂದಾಯಉಪವಿಭಾಗಾಧಿಕಾರಿ ಅಬೀದ ಗದ್ಯಾಳ, ತಹಶೀಲ್ದಾರ ವಿಜಯಕುಮಾರ ಕಡಕಭಾವಿ, ಇ. ಓ ಬಾಬು ರಾಠೋಡ,ಗುತ್ತಿಗೆದಾರ ಮಹಾದೇವ ಗಚ್ಚಿನಮಠ, ನಿವೇಶನ ಧಾನಿ ದಯಾನಂದ ಅವುಟಿ,ಸೇರಿದಂತೆ ಸಾತಲಗಾಂವ್ ,ನಾದ, ಸಾಲೋಟಗಿ ಸೇರಿದಂತೆ ಅನೇಕ ಗ್ರಾಮಗಳ ರೈತರು ಹಾಗೂ ಮುಖಂಡರು,ಜನಪ್ರತಿನಿಧಿಗಳು ವೇದಿಕೆಯಲ್ಲಿದ್ದರು.

ಮಾಜಿ ತಾ.ಪಂ ಅಧ್ಯಕ್ಷಶೇಖರ ರಾಠೋಡ, ಸೋಮಶೇಖರ ಮ್ಯಾಕೇರಿ, ಮಂಜುನಾಥ ಕಾಮಗೊಂಡ, ಸುಧೀರ ಕರಕಟ್ಟಿ,ಜಾವೀದ ಮೋಮಿನ್, ಸುಭಾಷ ಬಾಬರ್, ಇಲಯಾಸ ಬೋರಾಮಣಿ, ಬಸವರಾಜ ಗೋರನಾಳ,ಶಾಸಕರ ಅಪ್ತಕಾರ್ಯದರ್ಶಿ ತಮ್ಮಣ್ಣಾ ಖಟ್ಟೆ , ಸಂತೋಷ ವಾಲೀಕಾರ ಉಪಸ್ಥಿತರಿದ್ದರು.