Saturday, 14th December 2024

ಯುವರತ್ನನ ಸ್ಮರಣೆಯಲ್ಲಿ ಗಿಡ ವಿತರಿಸಿದ ಯುವನಾಯಕ

ತುಮಕೂರು: ಯುವರತ್ನ ಅಪ್ಪು ಸ್ಮರಣಾರ್ಥವಾಗಿ ಯುವನಾಯಕ ಸೊಗಡು ಕುಮಾರಸ್ವಾಮಿ ಅವರು ನೂರಾರು ಅಭಿಮಾನಿ ಗಳಿಗೆ ಗಿಡ ವಿತರಿಸಿ ಅಭಿ ಮಾನ, ಪರಿಸರ ಪ್ರೇಮ ಮೆರೆದಿದ್ದಾರೆ.
ಸುಮಾರು 400ಕ್ಕೂ ಅಧಿಕ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಉಚಿತವಾಗಿ ಮಾಜಿ ಸಚಿವ ಸೊಗಡು ಶಿವಣ್ಣ ಅವರ ಪುತ್ರ ಸೊಗಡು ಕುಮಾರಸ್ವಾಮಿ ಅವರು ಗಂಧದಗುಡಿ ಸಿನಿಮಾ ಪ್ರದರ್ಶನ ಏರ್ಪಡಿಸಿ, ಅಷ್ಟೂ ಮಂದಿಗೆ ನಾನಾ ರೀತಿಯ ಗಿಡಗಳನ್ನು ಉಚಿತವಾಗಿ ನೀಡಿ ಬೆಳೆಸುವಂತೆ ಮನವಿ ಮಾಡಿದ್ದಾರೆ.
ಈ ವೇಳೆ ಸೊಗಡು ಕುಮಾರಸ್ವಾಮಿ ಮಾತನಾಡಿ, ಅಪ್ಪು ಅವರ ಪರಿಸರ ಕಾಳಜಿ ನಮ್ಮೆಲ್ಲರಿಗೂ ಮಾದರಿ. ಅವರ ನೆನಪಿನಲ್ಲಿ ಅಭಿಮಾನಿಗಳಿಗೆ ವಿವಿಧ ರೀತಿಯ ಗಿಡಗಳನ್ನು ನೀಡಿ ಪೋಷಿಸಿ, ಬೆಳೆಸು ವಂತೆ ಮನವಿ ಮಾಡಿದ್ದೇನೆ ಎಂದರು. ಈ ಸಂದರ್ಭದಲ್ಲಿ ನಾಗರತ್ನಶಿವಣ್ಣ, ಊರುಕೆರೆ ನಂಜುಂಡಪ್ಪ, ಸನತ್, ಬಸವರಾಜು, ನವೀನ್ ಇತರರಿದ್ದರು.