ಅತಿಥಿಗಳಿಗೆ ಪ್ರಯಾಣ ಸೌಕರ್ಯವನ್ನು ಹೆಚ್ಚಿಸಲು ಜೂಮ್ಕಾರ್ ಏರ್ ಇಂಡಿಯಾ ಎಕ್ಸ್ಪ್ರೆಸ್ನೊಂದಿಗೆ ಪಾಲುದಾರಿಕೆ ಹೊಂದಿದೆ
Zoomcar Holdings, Inc. (“Zoomcar” ಅಥವಾ “ಕಂಪನಿ”) (Nasdaq: ZCAR), ಸ್ವಯಂ-ಡ್ರೈವ್ ಕಾರ್ ಹಂಚಿಕೆಗಾಗಿ NASDAQ-ಪಟ್ಟಿಮಾಡಿದ ಪ್ರಮುಖ ಮಾರುಕಟ್ಟೆ, ಏರ್ ಇಂಡಿಯಾ ಎಕ್ಸ್ಪ್ರೆಸ್ನೊಂದಿಗೆ ತನ್ನ ಪಾಲುದಾರಿಕೆಯನ್ನು ಪ್ರಕಟಿಸುತ್ತದೆ. ಈ ಸಹಯೋಗವು ಏರ್ ಇಂಡಿಯಾ ಎಕ್ಸ್ಪ್ರೆಸ್ ಅತಿಥಿಗಳಿಗೆ ಭಾರತದ ಅನೇಕ ನಗರಗಳಲ್ಲಿ ಪ್ರಯಾಣಿಸಲು ಸ್ವಯಂ-ಡ್ರೈವ್ ಕಾರು ಬಾಡಿಗೆಗೆ ತಡೆರಹಿತ ಪ್ರವೇಶವನ್ನು ನೀಡುವ ಮೂಲಕ ಪ್ರಯಾಣದ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. Zoomcar ನ ಡೆಲಿವರಿ ಆಯ್ಕೆಯೊಂದಿಗೆ, ಅತಿಥಿಗಳು ತಮ್ಮ ಆಯ್ಕೆಯ ಕಾರನ್ನು ಸುಲಭವಾಗಿ ತಲುಪಿಸಬಹುದು ಮತ್ತು ವಿಮಾನ ನಿಲ್ದಾಣದಿಂದ ನೇರವಾಗಿ ಪಡೆಯಬಹುದು.
ಈ ಪಾಲುದಾರಿಕೆಯ ಮೂಲಕ ಬೆಂಗಳೂರು, ಭುವನೇಶ್ವರ, ಚೆನ್ನೈ, ದೆಹಲಿ, ಗೋವಾ, ಗುವಾಹಟಿ, ಹೈದರಾಬಾದ್, ಇಂದೋರ್, ಜೈಪುರ, ಕೋಲ್ಕತ್ತಾ, ಕೊಚ್ಚಿ, ಲಕ್ನೋ, ಮಂಗಳೂರು, ಮಧುರೈ, ಮುಂಬೈ, ಪುಣೆ, ತಿರುಚಿರಾಪಳ್ಳಿ, ವಿಜಯವಾಡ ಮತ್ತು ವಿಶಾಖಪಟ್ಟಣಂ ಮುಂತಾದ ನಗರಗಳಲ್ಲಿ ಸಂಚರಿಸಲು ಬಯಸುವ ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಅತಿಥಿಗಳು ಏರ್ ಇಂಡಿಯಾ ಎಕ್ಸ್ ಪ್ರೆಸ್ನ ಪ್ರಶಸ್ತಿ ವಿಜೇತ ಆಪ್ ಮತ್ತು ವೆಬ್ಸೈಟ್ ಆಗಿರುವ airindiaexpress.com ನಲ್ಲಿ ನೇರವಾಗಿ ಸೆಲ್ಫ್- ಡ್ರೈವ್ ಕಾರುಗಳನ್ನು ಬುಕ್ ಮಾಡಬಹುದು ಮತ್ತು ಸೆಲ್ಫ್ ಡ್ರೈವ್ ಸೌಲಭ್ಯವನ್ನು ಆನಂದಿಸಬಹುದು. ಝೂಮ್ ಕಾರ್ ಸಂಸ್ಥೆಯು ಲಗೇಜ್ ಅಗತ್ಯಗಳನ್ನು ಪೂರೈಸುವಂತಹ ಮತ್ತು ಪ್ರಯಾಣಕ್ಕೆ ಸೂಕ್ತವಾಗಿ ಹೊಂದಿಕೊಳ್ಳುವ ಎಸ್ ಯು ವಿ ಗಳು, ಹ್ಯಾಚ್ಬ್ಯಾಕ್ಗಳು, ಸೆಡಾನ್ಗಳು ಮತ್ತು ಇವಿಗಳನ್ನು ಸೇರಿಕೊಂಡು ಸ್ಥಳೀಯವಾಗಿ ಲಭ್ಯವಿರುವ ಉನ್ನತ ಶ್ರೇಣಿಯ ದೊಡ್ಡ ಸಂಖ್ಯೆಯ ಸೆಲ್ಫ್- ಡ್ರೈವ್ ಕಾರುಗಳನ್ನು ಹೊಂದಿದೆ.
ಈ ಪಾಲುದಾರಿಕೆಯು ಅತಿಥಿಗಳ ವಿವಿಧ ಅಗತ್ಯತೆಗಳನ್ನು ಪೂರೈಸುತ್ತದೆ. ವಿಸ್ತಾರವಾದ ದೊಡ್ಡ ಸಂಖ್ಯೆಯ ಕಾರುಗಳನ್ನು ಹೊಂದಿದೆ ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ನ ಅನುಕೂಲಕರವಾದ ಆಡ್- ಆನ್ ಪ್ಯಾಕ್ಗಳಾದ ಕ್ಯಾರಿ-ಆನ್-ಎಕ್ಸ್ಟ್ರಾ, ಇಂಟರ್ ನ್ಯಾಷನಲ್ ಕನೆಕ್ಟಿಂಗ್ ಬ್ಯಾಗೇಜ್ ಆಂಡ್ ಸ್ಪೆಷಲ್ ಈಕ್ವಿಪ್ ಮೆಂಟ್ ಆಯ್ಕೆಗಳ ಮೂಲಕ ತರಿಸುವ ಲಗ್ಗೇಜ್ ಗಳನ್ನು ಸಾಗಿಸಲು ಸಾಕಷ್ಟು ಸ್ಥಳಾವಕಾಶ ಇರುವ ಕಾರುಗಳನ್ನೇ ಒದಗಿಸಲಾಗುತ್ತದೆ. ಝೂಮ್ ಕಾರ್ ಜೊತೆಗಿನ ಈ ಪಾಲುದಾರಿಕೆಯು ಅತಿಥಿಗಳಿಗೆ ಅತ್ಯುತ್ತಮ ಪ್ರಯಾಣ ಅನುಭವ ಒದಗಿಸುವುದರ ಜೊತೆಗೆ ಹತ್ತಿರ ಇರುವ ವಿಮಾನ ನಿಲ್ದಾಣಗಳಿಂದ ಅತಿಥಿಗಳು ಹೋಗ ಬಯಸುವ ಗಮ್ಯಸ್ಥಾನಗಳಿಗೆ ಹಿಂದೆಂದಿಗಿಂತಲೂ ಹೆಚ್ಚು ಸುಲಭವಾಗು ಮತ್ತು ಅನುಕೂಲಕರವಾಗಿ ಹೋಗಿ ತಲುಪಲು ಸಹಾಯ ಮಾಡುತ್ತದೆ.
ಝೂಮ್ ಕಾರ್ನ ಸಿಇಓ ಮತ್ತು ಸಹ- ಸಂಸ್ಥಾಪಕ ಗ್ರೆಗ್ ಮೊರಾನ್ ಈ ಕುರಿತು ಮಾತನಾಡಿ, “ಝೂಮ್ ಕಾರ್ನಲ್ಲಿ ನಾವು ನಮ್ಮ ಅತಿಥಿಗಳಿಗೆ ಸುಧಾರಿತ ಮತ್ತು ವೈಯಕ್ತೀಕರಿಸಿದ ಪ್ರಯಾಣದ ಅನುಭವಗಳನ್ನು ಒದಗಿಸುವ ಕಡೆಗೆ ಗಮನ ಹರಿಸಿದ್ದೇವೆ ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ ಜೊತೆಗಿನ ನಮ್ಮ ಪಾಲುದಾರಿಕೆ ಈ ಗುರಿಯತ್ತ ಮತ್ತೊಂದು ಮೆಟ್ಟಿಲಾಗಿದೆ. ನಮ್ಮ ಏರ್ ಪೋರ್ಟ್ ಡೆಲಿವರಿ ಫೀಚರ್ ಮೂಲಕ ಆಗಮನದಿಂದ ನಿರ್ಗಮನದವರೆಗೆ ಸೆಲ್ಫ್- ಡ್ರೈವ್ ಕಾರನ್ನು ಪಡೆಯುವುದು ಆನ್ಲೈನ್ ಫುಡ್ ಡೆಲಿವರಿಯಷ್ಟೇ ಸುಲಭವಾಗಿದೆ ಮತ್ತು ನಿಮ್ಮ ಸ್ವಂತ ಇಚ್ಛೆಯಂತೆ ಹೊಸ ಸ್ಥಳಗಳನ್ನು ಅನ್ವೇಷಿ ಸುವ ಸ್ವಾತಂತ್ರ್ಯ ಅತಿಥಿಗಳಿಗೆ ದೊರಕುತ್ತದೆ” ಎಂದು ಹೇಳಿದರು.
ಈ ಪಾಲುದಾರಿಕೆಯ ಕುರಿತು ಮಾತನಾಡಿದ ಏರ್ ಇಂಡಿಯಾ ಎಕ್ಸ್ ಪ್ರೆಸ್ನ ಸಿಸಿಓ ಅಂಕುರ್ ಗಾರ್ಗ್, “ಏರ್ ಇಂಡಿಯಾ ಎಕ್ಸ್ ಪ್ರೆಸ್ ಅತ್ಯುತ್ತಮವಾದ, ವೈಯಕ್ತಿಕೀಕರಿಸಿದ ಪ್ರಯಾಣದ ಅನುಭವವನ್ನು ಒದಗಿಸಲು ಬದ್ಧವಾಗಿದೆ. ನಮ್ಮ ಅತಿಥಿಗಳು ತಮ್ಮ ಪ್ರಯಾಣವನ್ನು ಅವರು ಇಷ್ಟ ಪಟ್ಟಂತೆ ನಿಖರ ವಾಗಿ ರೂಪಿಸಲು ಬೇಕಾದಂತೆ ಒದಗಿ ಬರುವ ಸರ್ವೀಸ್ ಗಳು, ಉತ್ಪನ್ನಗಳು ಮತ್ತು ದರಪಟ್ಟಿಯ ಎ- ಲಾ- ಕಾರ್ಟೆ ಮೆನುವನ್ನು ನೀಡುವ ಮೂಲಕ, ನಾವು ಪ್ರಯಾಣ ಸಂದರ್ಭದಲ್ಲಿ ಮುಖ್ಯವಾಗುವ ಮತ್ತೊಂದು ಪ್ರಮುಖ ಸೌಕರ್ಯವನ್ನು ಒದಗಿಸುವ ಅನುಕೂಲವನ್ನು ನೀಡುತ್ತಿದ್ದೇವೆ. ಝೂಮ್ ಕಾರ್ ಜೊತೆಗಿನ ನಮ್ಮ ಸಹಯೋಗದ ಮೂಲಕ ನಮ್ಮ ಅತಿಥಿಗಳು ಭಾರತದಾದ್ಯಂತ ಇರುವ ವಿಮಾನ ನಿಲ್ದಾಣಗಳಲ್ಲಿ ಅವರ ಪ್ರಯಾಣದ ಮೇಲೆ ನಿಯಂತ್ರಣವನ್ನು ಹೊಂದಬಹುದಾಗಿದೆ ಅವರಿಗೆ ಬೇಕಾದಂತೆ ಪ್ರಯಾಣ ಹೊಂದಿಸಿಕೊಳ್ಳಬಹುದಾಗಿದೆ” ಎಂದು ಹೇಳಿದರು.
ಸಾಂಪ್ರದಾಯಿಕ ಕಾಗದ ಪತ್ರಗಳನ್ನು ಒದಗಿಸುವ ಅಗತ್ಯವನ್ನು ತೆಗೆದುಹಾಕಲಾಗಿದ್ದು, ಅತಿಥಿಗಳು ತಮ್ಮ ಡ್ರೈವಿಂಗ್ ಲೈಸೆನ್ಸ್, ರಾಷ್ಟ್ರೀಯ ಐಡಿ ಮತ್ತು ಸೆಲ್ಫಿಯನ್ನು ಒದಗಿಸುವ ಮೂಲಕ ತಮ್ಮ ಝೂಮ್ ಕಾರ್ ನಲ್ಲಿ ಕಾರುಗಳನ್ನು ಬಾಡಿಗೆಗೆ ಪಡೆಯಬಹುದು. ಈ ಸೇವೆಯು ಗ್ರಾಹಕರ ಅಲ್ಪಾವಧಿಯ ಅಗತ್ಯಗಳನ್ನು ಪೂರೈಸುತ್ತದೆ, 8 ಗಂಟೆಗಳ ಪ್ಯಾಕೇಜ್ ಮೂಲಕ ಕಾರು ಬಾಡಿಗೆ ಪ್ಯಾಕೇಜ್ ಆರಂಭವಾಗುತ್ತಿದ್ದು, ವಿಸ್ತೃತ ಪ್ರಯಾಣಗಳಿಗೂ ಬಳಸಿಕೊಳ್ಳ ಬಹುದಾಗಿದೆ. ಝೂಮ್ ಕಾರ್ ನ ಕೀಲೆಸ್ ಪ್ರವೇಶ ತಂತ್ರಜ್ಞಾನದಿಂದಾಗಿ ಬಳಕೆದಾರರು ತಾವು ಆಯ್ಕೆ ಮಾಡಿದ ವಾಹನವನ್ನು ನೇರವಾಗಿ ಬಳಕೆದಾರ ಸ್ನೇಹಿ ಮೊಬೈಲ್ ಆಪ್ ಮೂಲಕ ಲಾಕ್ ಮಾಡಬಹುದು ಮತ್ತು ಅನ್ಲಾಕ್ ಮಾಡಬಹುದಾಗಿದೆ. ಈ ಕಾರಣದಿಂದ ಪಿಕ್- ಅಪ್ ಅಥವಾ ಡ್ರಾಪ್ ಮಾಡುವ ಸಂದರ್ಭದಲ್ಲಿ ಝೂಮ್ ಕಾರ್ ನ ಪ್ರತಿನಿಧಿಯನ್ನು ಭೇಟಿ ಮಾಡುವ ಅಗತ್ಯ ಇರುವುದಿಲ್ಲ.