ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Election 2025: ದೆಹಲಿಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ? ಮತ್ತೆರಡು ಸಮೀಕ್ಷೆಗಳು ಪ್ರಕಟ

ದೆಹಲಿಯಲ್ಲಿ ಹೊಸ ಸರ್ಕಾರವನ್ನು ಆಯ್ಕೆ ಮಾಡಲು 70 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಫೆ. 8 ರಂದು ಮತ ಎಣಿಕೆ ನಡೆಯಲಿದ್ದು, ಯಾರು ದೆಹಲಿ ಗದ್ದುಗೆ ಏರಲಿದ್ದಾರೆ ಎಂಬ ಕುತೂಹಲಕ್ಕೆ ಶನಿವಾರ ತೆರೆ ಬೀಳಲಿದೆ. ಈ ಮಧ್ಯೆ ಹಲವು ಸಮೀಕ್ಷೆಗಳು ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಬರಲಿದೆ ಎಂದು ಭವಿಷ್ಯ ನುಡಿದಿದೆ. ಇದೀಗ ಆಕ್ಸಿಸ್ ಮೈ ಇಂಡಿಯಾ ಮತ್ತು ಟುಡೇಸ್ ಚಾಣಕ್ಯ ಕೂಡ ಭವಿಷ್ಯ ನುಡಿದಿದ್ದು, 27 ವರ್ಷಗಳ ನಂತರ ಬಿಜೆಪಿ ದೆಹಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿದೆ.

ದಿಲ್ಲಿ ಗದ್ದುಗೆ ಬಿಜೆಪಿಗೆ ಗ್ಯಾರಂಟಿ? ಮತ್ತೆರಡು ಸಮೀಕ್ಷೆ ಔಟ್‌

Delhi Election 2025

Profile Deekshith Nair Feb 7, 2025 11:51 AM

ನವದೆಹಲಿ: ದೆಹಲಿಯಲ್ಲಿ(Delhi Election 2025) ಹೊಸ ಸರ್ಕಾರವನ್ನು ಆಯ್ಕೆ ಮಾಡಲು 70 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಫೆ. 8 ರಂದು ಮತ ಎಣಿಕೆ ನಡೆಯಲಿದ್ದು, ಯಾರು ದೆಹಲಿ ಗದ್ದುಗೆ ಏರಲಿದ್ದಾರೆ ಎಂಬ ಕುತೂಹಲಕ್ಕೆ ಶನಿವಾರ ತೆರೆ ಬೀಳಲಿದೆ. ಈ ಮಧ್ಯೆ ಹಲವು ಸಮೀಕ್ಷೆಗಳು(Exit Polls) ಈ ಬಾರಿ ಬಿಜೆಪಿಗೆ(BJP) ಸ್ಪಷ್ಟ ಬಹುಮತ ಬರಲಿದೆ ಎಂದು ಭವಿಷ್ಯ ನುಡಿದಿದೆ. ಇದೀಗ ಆಕ್ಸಿಸ್ ಮೈ ಇಂಡಿಯಾ( Axis My India) ಮತ್ತು ಟುಡೇಸ್ ಚಾಣಕ್ಯ(Today’s Chanakya) ಕೂಡ ಭವಿಷ್ಯ ನುಡಿದಿದ್ದು, 27 ವರ್ಷಗಳ ನಂತರ ಬಿಜೆಪಿ ದೆಹಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿದೆ.

ದೆಹಲಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮೂರೂ ಪಕ್ಷಗಳು ಸಾಕಷ್ಟು ಕಸರತ್ತು ನಡೆಸಿವೆ. ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹ್ಯಾಟ್ರಿಕ್‌ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ‌ ಕನಸು ಕಾಣುತ್ತಿದ್ದಾರೆ. ಇತ್ತ ಬಿಜೆಪಿ 27 ವರ್ಷಗಳ ನಂತರ ರಾಷ್ಟ್ರ ರಾಜಧಾನಿಯಲ್ಲಿ ಪ್ರಾಬಲ್ಯ ಸಾಧಿಸುವ ವಿಶ್ವಾಸದಲ್ಲಿದೆ. ಕಾಂಗ್ರೆಸ್‌ ಕೂಡ ʼಗ್ಯಾರಂಟಿʼ ಗೆದ್ದೇ ಗೆಲ್ಲುತ್ತೇವೆ ಎಂಬ ನಂಬಿಕೆಯಲ್ಲಿದೆ. ಆದರೆ ಚುನಾವಣೆಯ ಫಲಿತಾಂಶದ ಹಾವು ಏಣಿ ಆಟದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಹಲವರಿಗಿದೆ. ಮತದಾರನ ನಾಡಿ ಮಿಡಿತವನ್ನು ಅರಿಯುವುದು ಕಷ್ಟವಾದ್ದರಿಂದ ಫಲಿತಾಂಶ ಹೊರ ಬರುವವರೆಗೂ ಏನನ್ನೂ ಹೇಳಲಿಕ್ಕೆ ಆಗುವುದಿಲ್ಲ. ಆದರೆ ಹತ್ತಾರು ಎಕ್ಸಿಟ್‌ ಪೋಲ್‌ಗಳು ಈ ಬಾರಿ ಬಿಜೆಪಿ ಪಕ್ಷವು ಬಹುಮತದೊಂದಿಗೆ ಗೆಲುವು ಸಾಧಿಸಿ ಅಧಿಕಾರ ಹಿಡಿಯುತ್ತದೆ ಎಂದಿದೆ. ಮತದಾರ ಈ ಬಾರಿ ಬಿಜೆಪಿಯತ್ತ ಒಲವು ತೋರಿದ್ದಾನೆ ಎನ್ನಲಾಗಿದೆ.



ನಿಖರವಾದ ಚುನಾವಣಾ ಭವಿಷ್ಯವಾಣಿಗೆ ಹೆಸರುವಾಸಿಯಾಗಿರುವ ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆಯು ಬಿಜೆಪಿ ಪಕ್ಷವು 70 ಸ್ಥಾನಗಳಲ್ಲಿ 45-50 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದು, ಎಎಪಿ ಕೇವಲ 15-25 ಸ್ಥಾನಗಳಲ್ಲಿ ಮಾತ್ರ ಗೆಲ್ಲಲಿದೆ ಎಂದು ಹೇಳಿದೆ. ಬಿಜೆಪಿಗೆ ಶೇ. 48 ಮತಗಳು ಮತ್ತು ಎಎಪಿಗೆ ಶೇ 42 ಮತಗಳು ಸಿಗಲಿವೆ ಎಂದು ಅಂದಾಜಿಸಿದೆ. ಕಾಂಗ್ರೆಸ್ 7% ಮತಗಳೊಂದಿಗೆ 0-1 ಸ್ಥಾನಗಳನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ.

ಈ ಸುದ್ದಿಯನ್ನೂ ಓದಿ:Delhi Election 2025: ಚುನಾವಣೆಗೆ ಸಜ್ಜಾದ ದೆಹಲಿ; ಮೂರನೇ ಬಾರಿಗೆ ಹ್ಯಾಟ್ರಿಕ್‌ ಬಾರಿಸುತ್ತಾ ಆಪ್‌?

ಟುಡೇಸ್‌ ಚಾಣಕ್ಯ ಕೂಡ ಇದೇ ರೀತಿಯ ಭವಿಷ್ಯ ನುಡಿದಿದೆ. ಬಿಜೆಪಿ 49% ಮತಗಳ ಹಂಚಿಕೆಯೊಂದಿಗೆ 45-57 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ಹೇಳಿದೆ. ಎಎಪಿ 41% ಮತ ಹಂಚಿಕೆಯೊಂದಿಗೆ 13-25 ಸ್ಥಾನಗಳನ್ನು ಪಡೆಯಲಿದ್ದು, ಕಾಂಗ್ರೆಸ್ 10% ಮತ ಹಂಚಿಕೆಯೊಂದಿಗೆ 0-3 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಿದೆ. ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಎಲ್ಲಾ ಸಮೀಕ್ಷೆಗಳು ಬೋಗಸ್‌ ಎಂದಿದ್ದು,ಈ ಬಾರಿಯೂ ಎಎಪಿ ದೆಹಲಿಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಗೆಲ್ಲಲಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. ತಮ್ಮ ಎಕ್ಸ್‌ ಖಾತೆಯಲ್ಲಿ ಚುನಾವಣಾ ಫಲಿತಾಂಶದ ಸಮೀಕ್ಷೆಗಳನ್ನು ದೂಷಿಸಿದ್ದಾರೆ.