Friday, 13th December 2024

ಇಸ್ಲಾಮಾಬಾದ್‌ ನಲ್ಲಿ ಸಿಬ್ಬಂದಿ ಬಂಧನ;  ಪಾಕಿಸ್ತಾನ  ಉಪ ಹೈಮೀಷನರ್ ಗೆ ಸಮೆನ್ಸ್

ದೆಹಲಿ,

  ಇಸ್ಲಾಮಾಬಾದ್  ನಲ್ಲಿರುವ  ಭಾರತೀಯ ಹೈಕಮೀಷನ್  ಕಛೇರಿಯ ಇಬ್ಬರು  ಅಧಿಕಾರಿಗಳನ್ನು ಬಂಧಿಸಲಾಗಿದೆ  ಎಂಬ ವರದಿಗಳ ಹಿನ್ನಲೆಯಲ್ಲಿ   ಭಾರತ ವಿದೇಶಾಂಗ ಸಚಿವಾಲಯ,  ಸೋಮವಾರ   ಪಾಕಿಸ್ತಾನದ  ಉಪ ಹೈಕಮೀಷನ್  ಅವರನ್ನು ತನ್ನ  ಕಚೇರಿಗೆ ಕರೆಸಿಕೊಂಡು  ತನ್ನ  ತೀವ್ರ  ಪ್ರತಿಭಟನೆ  ದಾಖಲಿಸಿದೆ  ಎಂದು ಮೂಲಗಳು ಹೇಳಿವೆ.
ಭಾರತೀಯ  ಅಧಿಕಾರಿಗಳಿಗೆ  ಯಾವುದೇ ಕಿರುಕುಳ ನೀಡಿಲ್ಲ  ಅಥವಾ ವಿಚಾರಣೆಗೊಳಪಡಿಸಿಲ್ಲ    ಎಂದು  ಪಾಕಿಸ್ತಾನದ ಉಪ ಹೈ ಕಮೀಷನರ್  ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಂಬಂಧ ಪಟ್ಟ ಭಾರತೀಯ  ರಾಜತಾಂತ್ರಿಕ  ಸಿಬ್ಬಂದಿಗಳ ಭದ್ರತೆ ಹಾಗೂ ಸುರಕ್ಷತೆಯ  ಹೊಣೆ  ಪಾಕಿಸ್ತಾನದ ಸರ್ಕಾರದ್ದಾಗಿದೆ ಎಂದು    ಎಂದು   ಪ್ರತಿಭಟನೆಯಲ್ಲಿ ಎಚ್ಚರಿಸಲಾಗಿದೆ. ಇಬ್ಬರು  ಸಿಬ್ಬಂದಿಗಳನ್ನು  ಅವರ   ಅಧಿಕೃತ  ಕಾರುಗಳೊಂದಿಗೆ  ಹೈಮೀಷನರ್  ಕಚೇರಿಗೆ ತಕ್ಷಣವೇ  ವಾಪಸ್ಸು ಕಳುಹಿಸಬೇಕು ಎಂದು   ಸೂಚಿಸಲಾಗಿದೆ.
ಭಾರತೀಯ ಸಿಬ್ಬಂದಿಗಳೆಂದು ಗುರುತಿಸಲಾದ  ಸಿಐಎಸ್ ಎಫ್  ಭದ್ರತಾ ಅಧಿಕಾರಿ ಹಾಗೂ  ಚಾಲಕನನ್ನು  ಇಂದು ಬಂಧಿಸಲಾಗಿದೆ   ಎಂದು ಪಾಕಿಸ್ತಾನ ಮಾಧ್ಯಮಗಳು ವರದಿಮಾಡಿವೆ
ನವದೆಹಲಿಯಲ್ಲಿರುವ  ಪಾಕಿಸ್ತಾನ  ಹೈ ಕಮೀಷನ್ ನ  ಇಬ್ಬರು ಪಾಕಿಸ್ತಾನ ಅಧಿಕಾರಿಗಳು  ಬೇಹುಗಾರಿಕೆಯ ಆರೋಪದ ಮೇಲೆ  ಭಾರತ ದೇಶದದಿಂದ ಉಚ್ಚಾಟಿಸಿದ ಕೆಲ ದಿನಗಳ  ನಂತರ ಈ ಘಟನೆ ನಡೆದಿದೆ.
ಪಾಕಿಸ್ತಾನ ಹೈಕಮೀಷನ್ ನ ಇಬ್ಬರು ಅಧಿಕಾರಿಗಳಾದ ಮುಹಮದ್ ತಾಹಿರ್, ಹಾಗೂ ಅಭಿದ್ ಹುಸೇನ್   ಅತ್ಯಂತ ಸೂಕ್ಷ್ಮ  ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದಾಗ  ದೆಹಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.
ಈ ಇಬ್ಬರು ಉಚ್ಚಾಟಿತ ಪಾಕಿಸ್ತಾನ  ಆಧಿಕಾರಿಗಳು ಹೈ ಕಮೀಷನ್   ವೀಸಾ ವಿಭಾಗದಲ್ಲಿ  ಕಾರ್ಯ ನಿರ್ವಹಿಸುತ್ತಿದ್ದರು.
ಅಲ್ಲದೆ, ಪಾಕಿಸ್ತಾನಿ ಅಧಿಕಾರಿಗಳ ಕಾರು ಚಾಲಕನೂ  ಸಹ  ಬೇಹುಗಾರಿಕೆಯಲ್ಲಿ  ತೊಡಗಿದ್ದ  ಕಾರಣ ಆತನನ್ನೂ  ಭಾರತ ಉಚ್ಚಾಟಿಸಿತ್ತು,

ಅಧಿಕಾರಿಗಳನ್ನು ಭಾರತ ಉಚ್ಚಾಟಿಸಿದ ನಂತರ,    ತೀವ್ರ  ಆಕ್ರೋಶಗೊಂಡ ಪಾಕಿಸ್ತಾನ  ಭಾರತದ ಉಪ  ಹೈಮೀಷನರ್  ಅಧಿಕಾರಿಯನ್ನು   ಕರೆಸಿಕೊಂಡು  ತನ್ನ ತೀವ್ರ ಅಸಮಧಾನ ವ್ಯಕ್ತಪಡಿಸಿತ್ತು.
ಇತ್ತೀಚಿಗೆ  ಭಾರತೀಯ ರಾಜತಾಂತ್ರಿಕ ಅಧಿಕಾರಿಯೊಬ್ಬರನ್ನು   ಐಎಸ್ ಐ  ಸಂಪರ್ಕ ಹೊಂದಿರುವ ಪಾಕಿಸ್ತಾನದ ವ್ಯಕ್ತಿಯೊಬ್ಬ  ಕಿರುಕುಳ ನೀಡಿದ್ದ
ಐ ಎಸ್ ಐ ವ್ಯಕ್ತಿ   ಭಾರತದ ಉಪ ಹೈಕಮೀಷನರ್  ಗೌರವ್ ಅಹ್ಲುವಾಲಿಯಾ ಅವರ ನಿವಾಸ ಹೊರಗೆ  ಕಾದು ಕುಳಿತು, ಅವರು ಹೊರಬಂದ ನಂತರ   ಅವರ ಕಾರನ್ನು ಹಿಂಬಾಲಿಸಿ, ಬೆದರಿಕೆಯೊಡ್ಡಲು ಪ್ರಯತ್ನಿಸಿದ್ದ .