ಲಂಡನ್
ಕಾನೂನಾತ್ಮಕ ಕಾರಣಗಳಿಂದಾಗಿ ವಿವಾದಾತ್ಮಕ ಅಬಕಾರಿ ದೊರೆ, ಬೆಂಗಳೂರು ಮೂಲದ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದೆ.
ಇದೇ ಕಾರಣಗಳಿಗಾಗಿ ಈ ಪ್ರಕ್ರಿಯೆ ಮುಂದೂಡಲು ಬ್ರಿಟನ್ನ ಗೃಹ ಇಲಾಖೆ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಮಲ್ಯ ಬ್ರಿಟನ್ನಲ್ಲಿ ಆಶ್ರಯ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿದ್ದು, ಇದರ ಜತೆಗೆ ಬ್ರಿಟನ್ನಲ್ಲಿ ಮಲ್ಯ ಸಿವಿಲ್ ದಾವೆ ಎದುರಿಸುತ್ತಿರುವ ಅಂಶಗಳೆ ಗೃಹ ಇಲಾಖೆಗೆ ಬಹಳ ಅಡ್ಡಿಯಾಗಿ ಪರಿಣಮಿಸಿದೆ ಎಂದೂ ಹೇಳಲಾಗಿದೆ.
ಗೃಹ ಕಾರ್ಯದರ್ಶಿ ಪ್ರೀತಿ ಪಾಟೀಲ್ ಅವರ ಅನುಮತಿ ಇಲ್ಲದೇ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಲಾಗದು ಎಂದು ಭಾರತೀಯ ಹೈಕಮಿಷನ್ ಮೂಲಗಳು ಹೇಳಿವೆ