Sunday, 15th December 2024

ಜರ್ಮನಿಯಲ್ಲಿ 580 ಹೊಸ ಕೊವಿಡ್‍-19 ಪ್ರಕರಣ: ಒಟ್ಟು ಸಂಖ್ಯೆ 187,764ಕ್ಕೆ ಏರಿಕೆ

ಮಾಸ್ಕೋ

ಜರ್ಮನಿಯಲ್ಲಿ ಕಳೆದ 24 ಗಂಟೆಗಳಲ್ಲಿ 580 ಹೊಸ ಕೊವಿಡ್‍ -19 ಪ್ರಕರಣಗಳು ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1,87,764 ಕ್ಕೆ ತಲುಪಿದೆ ಎಂದು ರಾಬರ್ಟ್ ಕೋಚ್ ಸಂಸ್ಥೆ ಗುರುವಾರ ತಿಳಿಸಿದೆ.

ಇದೇ ಅವಧಿಯಲ್ಲಿ 26 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 8,856ಕ್ಕೆ ಏರಿದೆ.
ಹಿಂದಿನ ದಿನ ದೇಶದಲ್ಲಿ 345 ಹೊಸ ಪ್ರಕರಣಗಳು ಮತ್ತು 30 ಸಾವುಗಳು ವರದಿಯಾಗಿದ್ದವು.

ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೊವಿಡ್‍-19 ನ್ನು ವಿಶ್ವವ್ಯಾಪಿ ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು. ಇಲ್ಲಿಯವರೆಗೆ, ವಿಶ್ವಾದ್ಯಂತ 83 ಲಕ್ಷಕ್ಕೂ ಹೆಚ್ಚು ಜನರು ಕರೋನವೈರಸ್ ಸೋಂಕಿಗೆ ಒಳಗಾಗಿದ್ದು, 4,48,000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.