ಪ್ಯಾರಿಸ್: ಫ್ರಾನ್ಸ್‌ನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಕ್ಕಿಜ್ವರದ ತಡೆಗೆ ನವೆಂಬರ್ ಅಂತ್ಯದಿಂದ ಇದುವರೆಗೆ 1.3 ಕೋಟಿಗೂ ಹೆಚ್ಚು ಕೋಳಿ, ಪಕ್ಷಿಗಳನ್ನು ಕೊಲ್ಲಲಾಗಿದೆ ಎಂದು ಕೃಷಿ ಸಚಿವಾಲಯ ವರದಿ ತಿಳಿಸಿದೆ.
ಕಾಡು ಹಕ್ಕಿಗಳು ದೇಶಕ್ಕೆ ವಲಸೆ ಬಂದ ನಂತರದಲ್ಲಿ ಪಕ್ಷಿಗಳಲ್ಲಿ ವೈರಸ್ ಹರಡುವ ಪ್ರಮಾಣ ಹೆಚ್ಚಾಗಿದೆ. ವೈರಸ್ ಕಾಣಿಸಿಕೊಂಡ ನವೆಂಬರ್ 26 ರಿಂದ ಏಪ್ರಿಲ್ 8 ರವರೆಗೆ ಕೃಷಿ ಪ್ರದೇಶಗಳಲ್ಲಿ 1,230 ಹಕ್ಕಿಜ್ವರ ಪ್ರಕರಣಗಳು ದಾಖಲಾಗಿವೆ. 8 ದಿನಗಳಲ್ಲಿ ಸೋಂಕಿನ ಪ್ರಮಾಣ ಶೇ 10 ರಷ್ಟು ಹೆಚ್ಚಾಗಿದೆ ಎಂದು ಸಚಿವಾಲಯದ ಜಾಲತಾಣ ಹೇಳಿದೆ.