#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Visa Free: ವೀಸಾ ಇಲ್ಲದೆ ವಿದೇಶ ಪ್ರವಾಸ ಮಾಡಬಯಸುವಿರಾ? ಆ ರಾಷ್ಟ್ರಗಳು ಯಾವುವು?

ಇಂದು ವೀಸಾ ಇಲ್ಲದೆ ಕೆಲವೊಂದು ದೇಶಗಳಿಗೆ ಪ್ರಯಾಣಿಸಬಹುದು. ಇದರಿಂದ ವೀಸಾಗಾಗಿ ಯಾವುದೇ ಗೊಂದಲ ಮತ್ತು ತಲೆಕೆಡಿಸಿಕೊಳ್ಳುವ ಪರಿಯೇ ಎದುರಾಗುವುದಿಲ್ಲ. ಕೆಲವೊಂದು ದೇಶಗಳು ಯಾವುದೇ ವೀಸಾ ಇಲ್ಲದೆ ಭಾರತೀಯರನ್ನು ತಮ್ಮ ದೇಶಗಳಿಗೆ ಆಹ್ವಾನಿಸುತ್ತಿದ್ದು, ವೀಸಾ ಮುಕ್ತವಾಗಿ ಪ್ರಯಾಣಿಸಬಹುದು.

ಭಾರತೀಯರು ಈ ದೇಶಗಳಿಗೆ ವೀಸಾ ಇಲ್ಲದೆ ಹೋಗಬಹುದು!

visa free

Profile Pushpa Kumari Feb 9, 2025 7:00 AM

ನವದೆಹಲಿ: ಹೆಚ್ಚಿನವರು ವಿದೇಶಕ್ಕೆ ಪ್ರಯಾಣ ಮಾಡಬೇಕು‌, ಫ್ಯಾಮಿಲಿ ಟ್ರಿಪ್ ಹೋಗಬೇಕು ಇತ್ಯಾದಿ ಕನಸು ಕಾಣುತ್ತಾರೆ. ಹಿಂದೆಲ್ಲಾ ಫಾರಿನ್‌ಗೆ ಹೋಗುವುದು ಎಂದರೆ ದೊಡ್ಡ ಸಾಹಸ. ಪಾಸ್‌ಪೋರ್ಟ್‌ ಮಾಡಿಸುವುದೇ ದೊಡ್ಡ ಕಷ್ಟದ ಕೆಲಸವಾಗಿತ್ತು. ಆದರೆ ಇಂದು ವೀಸಾ ಇಲ್ಲದೆ (Visa- free) ಕೆಲವೊಂದು ದೇಶಗಳಿಗೆ ಪ್ರಯಾಣಿಸಬಹುದು. ಇದರಿಂದ ವೀಸಾಗಾಗಿ ತಲೆಕೆಡಿಸಿಕೊಳ್ಳುವ ಪರಿಯೇ ಎದುರಾಗುವುದಿಲ್ಲ. ಕೆಲವೊಂದು ದೇಶಗಳು ಯಾವುದೇ ವೀಸಾ ಇಲ್ಲದೆ ಭಾರತೀಯರನ್ನು ತಮ್ಮ ದೇಶಗಳಿಗೆ ಆಹ್ವಾನಿಸುತ್ತಿದ್ದು ಇಲ್ಲಿರೋ 10 ದೇಶಗಳಿಗೆ ನೀವು ವೀಸಾ ಇಲ್ಲದೇ ಪ್ರಯಾಣ ಬೆಳೆಸಬಹುದು. ಹಾಗಿದ್ದರೆ ವೀಸಾ ಮುಕ್ತವಾಗಿ ಪ್ರಯಾಣಿಸಬಹುದಾದ ಆ 10 ದೇಶಗಳು ಯಾವುದು? ಇಲ್ಲಿದೆ ಮಾಹಿತಿ.

ಇರಾನ್:

iran

ಇರಾನ್‌ ತನ್ನ ದೇಶದ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತೀಯರಿಗೆ ವೀಸಾ ಮುಕ್ತ ಪ್ರಯಾಣಕ್ಕೆ ಅವಕಾಶ ಮಾಡಿ ಕೊಟ್ಟಿದೆ. ವಿವಿಧ ಆಕರ್ಷಣೆಯ ತಾಣ ಹೊಂದಿರುವ ಇರಾನ್ ನಲ್ಲಿ ಟೆಹ್ರಾನ್, ಪರ್ಷಿಯನ್ ವಾಸ್ತುಶಿಲ್ಪಕ್ಕಾಗಿ ಇಸ್ಫಹಾನ್, ಶಿರಾಜ್, ಯಾಜ್ಡ್ ಸೇರಿದಂತೆ ವಿವಿಧ ಸ್ಥಳಗಳಿಗೆ ನೀವು ಭೇಟಿ ನೀಡಬಹುದು. ಕಶನ್, ತಬ್ರಿಜ್ ದ್ವೀಪಗಳು ಸಹ ಇಲ್ಲಿ ವಿಶಿಷ್ಟ ಅನುಭವ ನೀಡಲಿದ್ದು ವೀಸಾ ಮುಕ್ತವಾಗಿ ಪ್ರಯಾಣ ಮಾಡಬಹುದು.

ಥೈಲ್ಯಾಂಡ್:

thiland

ಭಾರತೀಯರಿಗೆ ಥೈಲ್ಯಾಂಡ್‌ಗೆ ಪ್ರಯಾಣ ಮಾಡಲು ಯಾವುದೇ ವೀಸಾ  ಬೇಕಾಗಿಲ್ಲ. ವಿಶೇಷವಾಗಿ ಥೈಲ್ಯಾಂಡ್ ಇಂದು ಯುವ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು ವಿಶೇಷವಾಗಿ ಬ್ಯಾಚುಲರ್ ಪಾರ್ಟಿಗಳಿಗೆ ಬ್ಯಾಂಕಾಕ್ ಹೆಚ್ಚು ಪ್ರಸಿದ್ದಿಯಲ್ಲಿದೆ. ಇಲ್ಲಿ ಕಡಿಮೆ ಬಜೆಟ್‌ನಲ್ಲಿ ವಿದೇಶಕ್ಕೆ ಪ್ರಯಾಣಿ ಸಲು ಬಯಸುವವರಿಗೆ ಥೈಲ್ಯಾಂಡ್ ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು.

ಮಾರಿಷಸ್:

mauritius

ಮಾರಿಷಸ್ ಹಿಂದೂ ಮಹಾಸಾಗರದಲ್ಲಿರುವ ಒಂದು ಸುಂದರವಾದ ದ್ವೀಪ ರಾಷ್ಟ್ರವಾಗಿದ್ದು, ಬಹಳ ಆಸಕ್ತಿಯ ಆಕರ್ಷಣೆಯಾಗಿದೆ.ಇಲ್ಲಿ ದ್ವೀಪಗಳ ನೈಸರ್ಗಿಕ ಸೌಂದರ್ಯವನ್ನು ಸವಿಯಲು ಇದೊಂದು ಅದ್ಭುತವಾದ ದ್ವೀಪವಾಗಿದೆ. ಇಲ್ಲಿ ಭಾರತೀಯರು ವೀಸಾ ರಹಿತವಾಗಿ ಈ ದ್ವೀಪದ ಪ್ರವಾಸ ಆಯೋಜಿಸಬಹುದು. ಇಲ್ಲಿ ಭಾರತೀಯರಿಗೆ 90 ದಿನಗಳವರೆಗೆ ವೀಸಾ ಮುಕ್ತ ಪ್ರವೇಶವನ್ನು ನೀಡಲಿದೆ

ಜೋರ್ಡಾನ್:  ಜೋರ್ಡಾನ್ ದೇಶವು ವಿವಿಧ ಸಂಸ್ಕೃತಿ ಮತ್ತು ಪ್ರಕೃತಿಯ ಸೌಂದರ್ಯ ಔತಣವನ್ನು ಪ್ರವಾಸಿಗರಿಗೆ ನೀಡಲಿದೆ. ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಪೆಟ್ರಾದ ಪ್ರಾಚೀನ ಅವಶೇಷ, ಅಮ್ಮನ್‌ನ ಐತಿಹಾಸಿಕ ತಾಣಗಳು, ವಾಡಿ ರಮ್‌ನ ಮರುಭೂಮಿ ಭೂದೃಶ್ಯಗಳು ಅಕಾಬಾ, ಮಡಬಾ ಮತ್ತು ನೆಬೋ ಪರ್ವತಗಳು ಮತ್ತು ಶ್ರೀಮಂತ ಪರಂಪರೆಯ ಔತಣವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು.

ಫಿಜಿ:

ದಕ್ಷಿಣ ಪೆಸಿಫಿಕ್‌ ಮಹಾಸಾಗರದಲ್ಲಿರುವ ದ್ವೀಪ ಫಿಜಿಗೆ ಭಾರತೀಯರು ವೀಸಾ ಇಲ್ಲದೆ ಪ್ರಯಾಣ ಮಾಡಬಹುದು. ಈ ದ್ವೀಪವು ಅಭಿವೃದ್ಧಿ ಹೊಂದುತ್ತಿರುವ ಪ್ರವಾಸೋದ್ಯಮವಾಗಿದ್ದು, ವರ್ಷದ ಯಾವುದೇ ತಿಂಗಳಿ ನ ಲ್ಲಿಯೂ ಪ್ರವಾಸ ಕೈಗೊಳ್ಳುವ ಅವಕಾಶ ಇರಲಿದೆ. ಭಾರತೀ ಯರು 120 ದಿನಗಳವರೆಗೆ ವೀಸಾ ಮುಕ್ತವಾಗಿ ಉಳಿಯಬಹುದು, ವಿಶ್ರಾಂತಿ ಪಡೆಯಲು ವಿಹಾರ ತಾಣವಾಗಿ ಬಳಸಿಕೊಳ್ಳಬಹುದು.

ಇಂಡೋನೇಷ್ಯಾ: 

INDO

ಇಂಡೊನೇಷ್ಯಾಗೆ ಕೂಡ ನೀವು ವಿಸಾ ಇಲ್ಲದೆ ಹೋಗಿ ಬರಬಹುದು. ಪ್ರಕೃತಿ ನಡುವೆ ನೆಲೆಸಿರುವ ಬಾಲಿ ಇಂಡೋನೇಷ್ಯಾ ಸೌಂದರ್ಯಕ್ಕೆ ಸಾಕ್ಷಿಯಾಗಿದೆ. ನೀವು ಸಾಹಸಪ್ರಿಯರಾಗಿದ್ದಲ್ಲಿ, ಕೊಮೊಡೊ ದ್ವೀಪವು ಒಂದು ರೋಮಾಂಚಕ ಅನುಭವವನ್ನು ನೀಡುವ ದ್ವೀಪದಂತಹ ರೋಮಾಂಚಕ ನಗರಗಳ ವೈವಿಧ್ಯಮಯ ಸ್ವರ್ಗ ಇಲ್ಲಿ ಇರಲಿದೆ. ಭಾರತೀಯರು 30 ದಿನಗಳವರೆಗೆ ವೀಸಾ ಮುಕ್ತ ಪ್ರವೇಶವನ್ನು ಆನಂದಿಸಬಹುದು.

ಜಮೈಕಾ:

jamacia

ಜಮೈಕಾ ಕೆರೆಬಿಯನ್‌ ದ್ವೀಪದ ಮತ್ತೊಂದು ಪ್ರಮುಖ ದ್ವೀಪ ವಾಗಿದ್ದು ಇಲ್ಲಿ ಹವಳದ ಬಂಡೆಗಳು, ಗುಹೆಗಳು, ಚೌಗು ಪ್ರದೇಶಗಳನ್ನು ಒಳ ಗೊಂಡ ಅನೇಕ ಆಕರ್ಷಕವಾದ ಪ್ರವಾಸಿ ತಾಣಗಳನ್ನು ಒಳಗೊಂಡಿದ್ದು 30 ದಿನಗಳವರೆಗೆ ವೀಸಾ-ಮುಕ್ತ ಪ್ರವೇಶವನ್ನು ನೀಡುತ್ತದೆ. ಅದರ ರೋಮಾಂಚಕ ವಾತಾವರಣದೊಂದಿಗೆ, ನೀವು ಸೆವೆನ್ ಮೈಲ್ ಬೀಚ್‌ನಲ್ಲಿ ವಿಶ್ರಾಂತಿ ಪಡೆಯಬಹುದು.

ಭೂತಾನ್:

bhoothan

ಭೂತಾನ್ ಕೂಡ ವೀಸಾ ಇಲ್ಲದೆ ಭಾರತೀಯ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಭೂತಾನ್ ಕೂಡ ಪರಿಸರ ಪ್ರಿಯವಾಗಿದ್ದು ಅದ್ಭುತ ಭೂದೃಶ್ಯಗಳು, ಶ್ರೀಮಂತ ಸಾಂಸ್ಕೃತಿಕ ಪರಂಪರೆ ಇರಲಿದ್ದು ಇದು ಪ್ರಯಾಣಿಕರಿಗೆ ಶಾಂತಿಯುತ ಮತ್ತು ಆಧ್ಯಾತ್ಮಿಕತೆಗೆ ಹೆಚ್ಚು ಪ್ರಸಿದ್ಧಿ ಯಾಗಿದೆ. 14 ದಿನಗಳವರೆಗೆ ವೀಸಾ ಮುಕ್ತವಾಗಿ ಈ ಸ್ಥಳಕ್ಕೆ ಭೇಟಿ ನೀಡಬಹುದು.

ಸೀಶೆಲ್ಸ್:

ಸೀಶೆಲ್ಸ್ ಉಷ್ಣವಲಯದ ಸ್ವರ್ಗವಾಗಿದ್ದ ಕಡಲತೀರಗಳು, ರೋಮಾಂ ಚಕ ಹವಳದ ಬಂಡೆಗಳು ಪ್ರವಾಸಿಗರನ್ನು ಸೆಳೆಯುತ್ತಿದೆ.ಇಲ್ಲಿನ ದ್ವೀಪಗಳು, ವೈವಿಧ್ಯಮಯ ವನ್ಯಜೀವಿಗಳಿಗೆ ಪ್ರಸಿದ್ಧಿಯಾದ ತಾಣ ವಾಗಿದೆ. ಈ ಪ್ರದೇಶದಲ್ಲಿ ನೀವು 30 ದಿನಗಳ ಕಾಲ ವೀಸಾ ಮುಕ್ತವಾಗಿ ಇರಬಹುದು.

ಇದನ್ನು ಓದಿ:Crime News: ಕಾಡುಹಂದಿ ಬೇಟೆ ವೇಳೆ ಮಿಸ್‌ ಫೈರ್‌! ಇಬ್ಬರ ಪ್ರಾಣಕ್ಕೆ ಕುತ್ತು ತಂದ ಬೇಟೆಯ ಹುಚ್ಚು

ಬಾರ್ಬಡೋಸ್: 

ಭಾರತೀಯರಿಗೆ 90 ದಿನಗಳವರೆಗೆ ವೀಸಾ-ಮುಕ್ತ ಪ್ರವೇಶದೊಂದಿಗೆ ಪ್ರಯಾಣ ಮಾಡಬಹುದು.ಇಲ್ಲಿನ ಬಾರ್ಬಡೋಸ್‌ನಲ್ಲಿರುವ ಕೆಲವು ಆಕರ್ಷಕ ಕಡಲತೀರಗಳು, ಸಾಹಸಮಯ ಟ್ರೆಕ್ಕಿಂಗ್, ರೋಮಾಂಚಕ ಉತ್ಸವಗಳು ಮತ್ತು ಆಧ್ಯಾತ್ಮಿಕ ಅನುಭವಗಳನ್ನು ನೀಡುವ ಆಕರ್ಷಕ ತಾಣವಾಗಿದೆ