Friday, 22nd November 2024

11 ಉಗ್ರ ಸಂಘಟನೆಗಳಿಗೆ ನಿಷೇಧ ಹೇರಿದ ಶ್ರೀಲಂಕಾ

ಕೊಲಂಬೋ: ನೆರೆಯ ದ್ವೀಪ ರಾಷ್ಟ ಶ್ರೀಲಂಕಾದಲ್ಲಿ ಪಾಕ್ ಮೂಲದ ಉಗ್ರ ಸಂಘಟನೆಗಳಾದ ಐಸಿಸ್, ಅಲ್‍ಖೈದಾ ಸೇರಿದಂತೆ 11 ಇಸ್ಲಾಂ ಮೂಲಭೂತವಾದಿ ಸಂಘಟನೆಗಳನ್ನು ನಿಷೇಧಿಸಲಾಗಿದೆ.

ಶ್ರೀಲಂಕಾದಲ್ಲಿ ಇಸ್ಲಾಂ ಮೂಲಭೂತವಾದಿ ಸಂಘಟನೆಗಳು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ಮನಗಂಡು ಅಧ್ಯಕ್ಷ ಗೊಟಾಬಾಯ ರಾಜಪಕ್ಷ ನಿರ್ಧಾರ ಕೈಗೊಂಡಿದ್ದಾರೆ.

ನಿಷೇಧಿತ ಸಂಘಟನೆಗಳ ಉಗ್ರರು ದೇಶದಲ್ಲಿ ಯಾವುದೇ ವಿಧ್ವಂಸಕ ಕೃತ್ಯಗಳನ್ನು ಕೈಗೊಂಡರೆ ಅಂತಹವರಿಗೆ 10 ರಿಂದ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಸ್ಥಳೀಯ ಶ್ರೀಲಂಕಾ ಇಸ್ಲಾಮಿಕ್ ಸ್ಟೂಡೆಂಟ್ ಮೂವ್‍ಮೆಂಟ್ ಸಂಘಟನೆಯನ್ನು ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily