Thursday, 12th December 2024

ತೈಲ ಸಂಗ್ರಹಣಾ ಘಟಕಕ್ಕೆ ಸಿಡಿಲು: 121 ಜನರಿಗೆ ಗಾಯ

ಹವಾನಾ: ಕ್ಯೂಬಾದ ಮತಾನ್ಜಾಸ್ ನಗರದಲ್ಲಿ ಶನಿವಾರ ತೈಲ ಸಂಗ್ರಹಣಾ ಘಟಕಕ್ಕೆ ಸಿಡಿಲು ಬಡಿದ ಪರಿಣಾಮ ಭಾರಿ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು 121 ಜನರು ಗಾಯಗೊಂಡಿದ್ದು, 17 ಮಂದಿ ಅಗ್ನಿಶಾಮಕ ಸಿಬ್ಬಂದಿ ಕಾಣೆಯಾಗಿದ್ದಾರೆ.

ಶುಕ್ರವಾರ ತಡರಾತ್ರಿ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿತ್ತು. ಈ ವೇಳೆ ಇಂಧನ ಟ್ಯಾಂಕ್‌ಗೆ ಸಿಡಿಲು ಬಡಿದು ಜ್ವಾಲೆ ಹೊತ್ತಿ ಯುರಿದಿದೆ. ಘಟನಾ ಸ್ಥಳದಿಂದ 1,900 ಜನರನ್ನು ಸ್ಥಳಾಂತರಿಸಲಾಗಿದೆ.

ಮತಾಂಜಾಸ್ ಸೂಪರ್‌ಟ್ಯಾಂಕರ್ ಬೇಸ್‌ನಲ್ಲಿ ಬೆಂಕಿ ನಂದಿಸಲು ಅಗ್ನಿಶಾಮಕ ದಳದವರು ಇನ್ನೂ ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಕ್ಯೂಬಾದ ಪ್ರೆಸಿಡೆನ್ಸಿಯ ಅಪ್‌ಡೇಟ್ ಪ್ರಕಾರ, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರಲ್ಲಿ ಇಂಧನ ಸಚಿವ ಲಿವಾನ್ ಅರೋಂಟೆ ಕೂಡ ಸೇರಿದ್ದಾರೆ.