Friday, 20th September 2024

ನಿಷೇಧಿತ ಚಲನಚಿತ್ರ ವೀಕ್ಷಣೆ: ವಿದ್ಯಾರ್ಥಿಗೆ 14 ವರ್ಷ ಜೈಲು ಶಿಕ್ಷೆ

ಉತ್ತರ ಕೊರಿಯಾ: ನಿಷೇಧಿತ ಚಲನಚಿತ್ರ ವೀಕ್ಷಿಸಿದ್ದಕ್ಕಾಗಿ ಉತ್ತರ ಕೊರಿಯಾದ ವಿದ್ಯಾರ್ಥಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಉತ್ತರ ಕೊರಿಯಾದಲ್ಲಿ ಶಾಲಾ ಬಾಲಕನಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸ ಲಾಗಿದೆ. ವಿದ್ಯಾರ್ಥಿಯನ್ನು ನವೆಂಬರ್ 7 ರಂದು ನಿಷೇಧಿತ ಮೂವಿ ವೀಕ್ಷಿಸಿದ ಆರೋಪದ ಮೇಲೆ ಬಂಧಿಸಲಾಯಿತು.ಇದು ‘ದಿ ಅಂಕಲ್’ ಎಂಬ ಚಿತ್ರವಾ ಗಿದ್ದು, ಇದು ದಕ್ಷಿಣ ಕೊರಿಯಾದ ಚಿತ್ರವಾಗಿದೆ. ಉತ್ತರ ಕೊರಿಯಾದ ಸರ್ಕಾ ರವು ದಕ್ಷಿಣ ಕೊರಿಯಾದ ಚಲನಚಿತ್ರಗಳನ್ನು ವೀಕ್ಷಿಸುವುದನ್ನು ಸ್ಥಳೀಯರಿಗೆ ನಿಷೇಧಿಸಿದೆ. ವಿದ್ಯಾರ್ಥಿಯನ್ನು ಹೂಸ್ಟನ್ ನಗರದ ಶಾಲೆಯೊಂದರಲ್ಲಿ ಬಂಧಿಸ ಲಾಗಿದೆ.

ಚಿತ್ರ ನೋಡಿದ ಐದು ನಿಮಿಷದಲ್ಲಿ ವಿದ್ಯಾರ್ಥಿಯನ್ನು ಬಂಧಿಸಲಾಯಿತು. ನಂತರ 14 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸ ಲಾಯಿತು. ಈ ಹಿಂದೆ ಪೋರ್ನ್ ಸಿನಿಮಾ ನೋಡುತ್ತಿದ್ದ ವಿದ್ಯಾರ್ಥಿಯನ್ನು ಬಂಧಿಸಲಾಗಿತ್ತು. ನಂತರ ಅವರ ಕುಟುಂಬವನ್ನು ಜೈಲಿಗೆ ಹಾಕಲಾಯಿತು.

ಉತ್ತರ ಕೊರಿಯಾವು ವಿಚಿತ್ರ ವ್ಯವಸ್ಥೆಯನ್ನು ಹೊಂದಿದೆ. ಇದರ ಅಡಿಯಲ್ಲಿ, ಒಬ್ಬ ವ್ಯಕ್ತಿಯು ಯಾವುದೇ ರೀತಿಯಲ್ಲಿ ಸಾಂಸ್ಕೃ ತಿಕ ಅಪರಾಧ ಮಾಡಿದರೆ, ಅವನನ್ನು ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಇದಲ್ಲದೇ 2 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.