Monday, 16th September 2024

ಬ್ರೂಕ್ಲಿನ್‌ ಸುರಂಗ ನಿಲ್ದಾಣದಲ್ಲಿ ಶೂಟೌಟ್: 16 ಮಂದಿಗೆ ಗುಂಡೇಟು

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಸುರಂಗ ನಿಲ್ದಾಣದಲ್ಲಿ ಸಂಭವಿಸಿದ ಶೂಟೌಟ್ ನಲ್ಲಿ ಕನಿಷ್ಠ 16 ಮಂದಿಗೆ ಗುಂಡೇಟು ತಗುಲಿದ್ದು, ಹಲವರಿಗೆ ಗಾಯ ಗಳಾಗಿವೆ.

ಅತೀ ಹೆಚ್ಚು ಪ್ರಯಾಣಿಕರಿದ್ದ ಸಂದರ್ಭದಲ್ಲಿ ಮಾಸ್ಕ್ ಧರಿಸಿದ್ದ ವ್ಯಕ್ತಿ ಏಕಾಏಕಿ ಗುಂಡಿನ ದಾಳಿ ಆರಂಭಿಸಿದ್ದಾನೆ. ಈ ವೇಳೆ ಪ್ರಯಾಣಿಕರಿಗೆ ಗುಂಡೇಟು ತಗುಲಿದೆ ಎನ್ನಲಾಗಿದೆ.

ಕಾರ್ಯಾಚರಣೆ ವೇಳೆ ಸುರಂಗ ಮಾರ್ಗದಲ್ಲಿ ಸ್ಫೋಟಕ ಡಿವೈಸ್ ಗಳು ಪತ್ತೆಯಾಗಿವೆ. ಮುಂಜಾಗ್ರತಾ ಕ್ರಮವಾಗಿ ಈ ಮಾರ್ಗದಲ್ಲಿ ಬರುವ ಇತರೆ ನಿಲ್ದಾಣಗಳನ್ನು ಮತ್ತು ಈ ಮಾರ್ಗದಲ್ಲಿ ಸೇರುವ ಪ್ರದೇಶಗಳಲ್ಲಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.