Thursday, 19th September 2024

ಕೆನಡಾ ಸಂಸತ್ ಗೆ ಭಾರತೀಯ ಮೂಲದ 17 ಮಂದಿ ಆಯ್ಕೆ

ಟೊರೊಂಟೋ: ಚುನಾವಣೆಯಲ್ಲಿ ಬಹುಮತ ಸಾಧಿಸುವುದಕ್ಕೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೋ ವಿಫಲಗೊಂಡಿದ್ದು, ಭಾರತೀಯ ಮೂಲದ 17 ಮಂದಿ ಕೆನೆಡಿಯನ್ನರು ಸಂಸತ್ ಗೆ ಆಯ್ಕೆಯಾಗಿದೆ.

338 ಸದಸ್ಯ ಬಲ ಹೊಂದಿರುವ ಸಂಸತ್ ನಲ್ಲಿ ಟ್ರೂಡೋ ನೇತೃತ್ವದ ಪಕ್ಷಕ್ಕೆ 170 ಸ್ಥಾನಗಳು ದೊರೆತಿದ್ದು 14 ಸಂಸದರ ಬೆಂಬಲದ ಕೊರತೆ ಎದುರಾಗಿದೆ.

ಜಗ್ಮೀತ್ ಸಿಂಗ್ ನೇತೃತ್ವದ ನ್ಯೂ ಡೆಮೊಕ್ರೆಟಿಕ್ ಪಾರ್ಟಿ (ಎನ್ ಡಿಪಿ)ಯಿಂದ ಆಯ್ಕೆಯಾಗಿರುವ ಸಂಸದರ ಸಂಖ್ಯೆ 24 ರಿಂದ 27 ಕ್ಕೆ ಏರಿಕೆಯಾಗಿದ್ದು ಕಿಂಗ್ ಮೇಕರ್ ಪಕ್ಷವಾಗಿದೆ.

ಕನ್ಸರ್ವೆಟೀವ್ ಪಕ್ಷಕ್ಕೆ 122 ಸ್ಥಾನಗಳು ದೊರೆತಿದ್ದು ಕಳೆದ ಬಾರಿಗಿಂತಲೂ ಕೇವಲ ಒಂದು ಸ್ಥಾನವನ್ನು ಹೆಚ್ಚಿಸಿ ಕೊಂಡಿದೆ. ಜಗ್ಮೀತ್ ಸಿಂಗ್, ಮಾಜಿ ಸಚಿವ, ಟಿಮ್ ಉಪ್ಪಲ್, ಹಾಲಿ ಸಚಿವರಾದ ಹರ್ಜೀತ್ ಸಿಂಗ್ ಸಜ್ಜನ್, ಬರ್ದಿಶ್ ಚಗ್ಗರ್, ಅನಿತಾ ಆನಂದ್ ಸಂಸತ್ ಗೆ ಆಯ್ಕೆಯಾಗಿರುವ ಭಾರತೀಯ ಕೆನೆಡಿಯನ್ನ ರಾಗಿದ್ದಾರೆ.

ರಕ್ಷಣಾ ಸಚಿವ ಹರ್ಜಿತ್ ಸಿಂಗ್ ಸಜ್ಜನ್ ವ್ಯಾಂಕೋವರ್ ದಕ್ಷಿಣ ಕ್ಷೇತ್ರದಿಂದ ಕನ್ಸರ್ವೇಟೀವ್ ಪಕ್ಷದ ಸುಖ್ಬೀರ್ ಗಿಲ್ ಅವರನ್ನು ಸೋಲಿಸಿ ಪುನರಾಯ್ಕೆ ಯಾಗಿದ್ದಾರೆ.