Monday, 16th September 2024

ಅಪಾರ್ಟ್‌ಮೆಂಟ್ ಕಟ್ಟಡಕ್ಕೆ ಬೆಂಕಿ: 19 ಜನರ ಸಾವು, 63 ಮಂದಿಗೆ ಗಾಯ

ನ್ಯೂಯಾರ್ಕ್: ನಗರದಲ್ಲಿ ಬಹುಮಹಡಿ ಅಪಾರ್ಟ್‌ಮೆಂಟ್ ಕಟ್ಟಡಕ್ಕೆ ಬೆಂಕಿ ತಗುಲಿ ಒಂಬತ್ತು ಮಕ್ಕಳು ಸೇರಿ ದಂತೆ ಕನಿಷ್ಠ 19 ಜನರು ಮೃತಪಟ್ಟಿದ್ದಾರೆ. 63ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಮೇಯರ್ ಎರಿಕ್ ಆಡಮ್ಸ್, ಪೋರ್ಟಬಲ್ ಎಲೆಕ್ಟ್ರಿಕ್ ಹೀಟರ್‌ನಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

“ಪ್ರತ್ಯಕ್ಷ ಸಾಕ್ಷಿಗಳ ಆಧಾರದ ಮೇಲೆ ಪೋರ್ಟಬಲ್ ಎಲೆಕ್ಟ್ರಿಕ್ ಹೀಟರ್‌ನಿಂದ ಮಲಗುವ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ” ಎಂದು ನ್ಯೂಯಾರ್ಕ್ ಸಿಟಿ ಅಗ್ನಿಶಾಮಕ ಇಲಾಖೆಯ ಆಯುಕ್ತ ಡೇನಿಯಲ್ ನಿಗ್ರೋ ತಿಳಿಸಿದರು.

ಬ್ರಾಂಕ್ಸ್ ಮೃಗಾಲಯದ ಪೂರ್ವ 181 ನೇ ಬೀದಿಯಲ್ಲಿರುವ 19 ಅಂತಸ್ತಿನ ಕಟ್ಟಡದ ಎರಡನೇ ಮತ್ತು ಮೂರನೇ ಮಹಡಿಗಳಲ್ಲಿ ಸ್ಫೋಟಗೊಂಡ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ತೀವ್ರತೆಗೆ ಗಾಬರಿಗೊಂಡ ಜನ ಮಹಡಿ ಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಹತಾಶವಾಗಿ ಕಟ್ಟಡ ಮೇಲೆ ಅತ್ತಿತ್ತ ಓಡಾಡುವ ದೃಶ್ಯಗಳು ಕಂಡು ಬಂದಿವೆ. ತಕ್ಷಣ ಸ್ಥಳಕ್ಕೆ 200 ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ.

ನ್ಯೂಯಾರ್ಕ್ ನಗರದ ಅಗ್ನಿಶಾಮಕ ಇಲಾಖೆಯ ಕಮಿಷನರ್ ಡೇನಿಯಲ್ ನಿಗ್ರೋ ಅವರು ಬೆಂಕಿ ವೇಗವಾಗಿ ಆವರಿಸಿದೆ ಮತ್ತು ಹೊಗೆ ದಟ್ಟವಾಗಿದೆ ಆವರಿಸಿ ಕೊಂಡ ಪರಿಣಾಮ ಜನ ಉಸಿರುಗಟ್ಟಿ ಪ್ರಾಣ ಬಿಟ್ಟಿದ್ದಾರೆ ಎಂದು ಹೇಳಿದರು. ಅಗ್ನಿಶಾಮಕ ದಳದವರು ಹತ್ತಿರದ ಏಣಿಯ ಮೇಲೆ ಕಾರ್ಯಾಚರಣೆ ನಡೆಸಿದರು.

ಅಪಾರ್ಟ್‌ಮೆಂಟ್‌ನ ಬಾಗಿಲು ತೆರೆದಿದ್ದು, ಬೆಂಕಿ ಮತ್ತು ಹೊಗೆ ಹರಡಲು ಅವಕಾಶ ಮಾಡಿಕೊಟ್ಟಿದೆ. ಬಾಗಿಲು ಮುಚ್ಚಿದರೆ ಹೊಗೆ ಮತ್ತು ಬೆಂಕಿಯ ಹರಡುವಿಕೆಯು ಆ ಅಪಾರ್ಟ್ಮೆಂಟ್ನಲ್ಲಿ ಸಾಧ್ಯವಾಗುತ್ತಿರಲಿಲ್ಲ ಎಂದು ನಿಗ್ರೋ ಹೇಳಿದರು.

1990 ರಲ್ಲಿ ಬ್ರಾಂಕ್ಸ್‌ನಲ್ಲಿರುವ ಹ್ಯಾಪಿ ಲ್ಯಾಂಡ್ ನೈಟ್‌ಕ್ಲಬ್‌ನಲ್ಲಿ ಇದೇ ರೀತಿಯ ಅಗ್ನಿ ಅವಘಡ ಸಂಭವಿಸಿತ್ತು. ಡಿಸೆಂಬರ್ 2017 ರಲ್ಲಿ, ನ್ಯೂಯಾರ್ಕ್ ನಗರದ ಬ್ರಾಂಕ್ಸ್‌ನಲ್ಲಿನ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ 25 ವರ್ಷಗಳಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 13 ಜನರು ಮೃತಪಟ್ಟಿದ್ದರು.