ವಾಷಿಂಗ್ಟನ್: ಅಫ಼್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ಬಳಿಕ, ಅಲ್ಲಿನ ಜನರು ಅಫ಼್ಗಾನಿಸ್ತಾನ ಬಿಟ್ಟು ತೆರಳಲು ಹವಣಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಏರ್ ಲಿಫ್ಟ್ ನಡೆಯುತ್ತಿದ್ದು, ಇತಿಹಾಸದಲ್ಲೇ ಅತಿದೊಡ್ಡ ಏರ್ಲಿಫ್ಟ್ ಆಗಿದೆ.
ಒಂದೇ ದಿನ ಅಫ಼್ಘಾನ್ ನಿಂದ 19,000 ಜನರನ್ನು ಕಾಬೂಲ್‌ನಿಂದ ಯುಎಸ್ಗೆ ಕರೆತರಲಾಗಿದೆ. ಈ ಮೂಲಕ ಇಲ್ಲಿಯವರೆಗೆ ಒಟ್ಟು 82,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಹೇಳಿದ್ದಾರೆ.
‘ಆ.14 ರಿಂದ 82,300ಕ್ಕೂ ಹೆಚ್ಚು ಜನರನ್ನು ಕಾಬೂಲ್‌ನಿಂದ ಕರೆತರಲಾಗಿದೆ. ಅದೇ ರೀತಿ ಕೇವಲ 24 ಗಂಟೆಗಳ ಅವಧಿಯಲ್ಲಿ 90 ಯುಎಸ್ ಮಿಲಿಟರಿ ಮತ್ತು ಒಕ್ಕೂಟದ ವಿಮಾನಗಳಲ್ಲಿ ಸುಮಾರು 19,000 ಜನರನ್ನು ಸ್ಥಳಾಂತರಿಸಲಾಗಿದೆ.