Wednesday, 11th December 2024

ಅತಿದೊಡ್ಡ ಏರ್​ಲಿಫ್ಟ್​: ಕಾಬೂಲ್‌ನಿಂದ ಯುಎಸ್​ಗೆ 19,000 ಜನರ ಸ್ಥಳಾಂತರ

ವಾಷಿಂಗ್ಟನ್: ಅಫ಼್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ಬಳಿಕ, ಅಲ್ಲಿನ ಜನರು ಅಫ಼್ಗಾನಿಸ್ತಾನ ಬಿಟ್ಟು ತೆರಳಲು ಹವಣಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಏರ್ ಲಿಫ್ಟ್ ನಡೆಯುತ್ತಿದ್ದು, ಇತಿಹಾಸದಲ್ಲೇ ಅತಿದೊಡ್ಡ ಏರ್​ಲಿಫ್ಟ್​ ಆಗಿದೆ.

ಒಂದೇ ದಿನ ಅಫ಼್ಘಾನ್ ನಿಂದ 19,000 ಜನರನ್ನು ಕಾಬೂಲ್‌ನಿಂದ ಯುಎಸ್​ಗೆ ಕರೆತರಲಾಗಿದೆ. ಈ ಮೂಲಕ ಇಲ್ಲಿಯವರೆಗೆ ಒಟ್ಟು 82,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಯುಎಸ್​ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಹೇಳಿದ್ದಾರೆ.

‘ಆ.14 ರಿಂದ 82,300ಕ್ಕೂ ಹೆಚ್ಚು ಜನರನ್ನು ಕಾಬೂಲ್‌ನಿಂದ ಕರೆತರಲಾಗಿದೆ. ಅದೇ ರೀತಿ ಕೇವಲ 24 ಗಂಟೆಗಳ ಅವಧಿಯಲ್ಲಿ 90 ಯುಎಸ್ ಮಿಲಿಟರಿ ಮತ್ತು ಒಕ್ಕೂಟದ ವಿಮಾನಗಳಲ್ಲಿ ಸುಮಾರು 19,000 ಜನರನ್ನು ಸ್ಥಳಾಂತರಿಸಲಾಗಿದೆ.