Monday, 16th September 2024

ಹವಾಮಾನ ವೈಪರೀತ್ಯಕ್ಕೆ ಸಿಲುಕಿ 21 ಮಂದಿ ಓಟಗಾರರ ಸಾವು

ಬೀಜಿಂಗ್: ಚೀನಾದ ಗನ್ಸು ಪ್ರಾಂತ್ಯದಲ್ಲಿ ಮಳೆ, ಭಾರೀ ಗಾಳಿಗೆ ಸಿಲುಕಿ 21 ಮಂದಿ ಓಟಗಾರರು ಮೃತಪಟ್ಟಿದ್ದಾರೆ.

ವಾಯುವ್ಯ ಗನ್ಸು ಪ್ರಾಂತ್ಯದ ಬೈಯಿನ್ ನಗರದ ಸಮೀಪವಿರುವ ಯೆಲ್ಲೊ ರಿವರ್ ಸ್ಟೋನ್ ಅರಣ್ಯ ಪ್ರದೇಶದಲ್ಲಿ 100 ಕಿ.ಮೀ ದೂರದ ಗುಡ್ಡಗಾಡು ಓಟ ಏರ್ಪಡಿಸಲಾಗಿತ್ತು. ಇದರಲ್ಲಿ ಭಾಗಿಯಾದ 21 ಮಂದಿ ಓಟಗಾರರು ಹವಾಮಾನ ವೈಪರೀತ್ಯಕ್ಕೆ ಸಿಲುಕಿದ್ದಾರೆ.

ಕೆಲವೇ ಕ್ಷಣಗಳ ಅಂತರದಲ್ಲಿ ಹವಾಮಾನದಲ್ಲಿ ಭಾರೀ ಬದಲಾವಣೆ ಸಂಭವಿ ಸಿತು. ಆಲಿಕಲ್ಲು ಮಳೆಯಾಗಿ, ನಂತರ ಹಿಮಪಾತ ಉಂಟಾಯಿತು. ಬಲವಾದ ಗಾಳಿ ಬೀಸಲಾರಂಭಿಸಿತು. ತಾಪಮಾನದಲ್ಲಿ ತೀವ್ರ ಕುಸಿತ ಉಂಟಾಯಿತು ಎಂದು ಸ್ಥಳೀಯ ಮೇಯರ್ ತಿಳಿಸಿದ್ದಾರೆ.

ಬಳಿಕ, ನೆರವಿಗಾಗಿ ಸಂದೇಶಗಳನ್ನು ಸ್ವೀಕರಿಸಿದ ಸ್ವಲ್ಪ ಸಮಯದ ನಂತರ, ಮ್ಯಾರಥಾನ್ ಸಂಘಟಕರು ತಮ್ಮ ತಂಡವನ್ನು ರವಾನಿಸಿದರು. ಸ್ಥಳೀಯ ಅಧಿಕಾರಿಗಳು ಹೆಚ್ಚಿನ ರಕ್ಷಣಾ ಸಿಬ್ಬಂದಿಯನ್ನು ಸಹಾಯಕ್ಕಾಗಿ ಕಳುಹಿಸಿದರು. ಓಟವನ್ನು ತಕ್ಷಣವೇ ರದ್ದು ಮಾಡಲಾಯಿತು.

Leave a Reply

Your email address will not be published. Required fields are marked *