Thursday, 19th September 2024

ಇಮ್ರಾನ್​ ಖಾನ್​ ರಾಜೀನಾಮೆಗೆ ಒತ್ತಡ: 24 ಗಂಟೆಗಳ ಗಡುವು

ಇಸ್ಲಾಮಾಬಾದ್: ಪಾಕಿಸ್ತಾನವನ್ನು ಸಂಪೂರ್ಣ ದಿವಾಳಿಯತ್ತ ಕೊಂಡೊಯ್ದ ಪ್ರಧಾನಿ ಇಮ್ರಾನ್​ ಖಾನ್​ ರಾಜೀನಾಮೆಗೆ ಒತ್ತಡಗಳು ಬರುತ್ತಿರುವ ಬೆನ್ನಲ್ಲೇ ಇದೀಗ ಅವರ ರಾಜೀನಾಮೆಗೆ 24 ಗಂಟೆಗಳ ಗಡುವು ನೀಡಲಾಗಿದ್ದು, ಇದಾಗಲೇ ಹಲವಾರು ಗಂಟೆಗಳು ಕಳೆದಿವೆ.

ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲವಾಲ್‌ ಭಟ್ಟೊ ಜರ್ದಾರಿ ಅವರು 24 ಗಂಟೆಗಳ ಗಡುವು ನೀಡಿದ್ದಾರೆ.

ಇಮ್ರಾನ್ ಖಾನ್ ದೇಶದ ಆರ್ಥಿಕತೆಯನ್ನು ಕೆಟ್ಟದಾಗಿ ನಿರ್ವಹಿಸುತ್ತಿದ್ದಾರೆ ಎಂದು ಗಂಭೀರ ಆರೋಪಗಳು ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇಮ್ರಾನ್​ ಖಾನ್​ ಸಂಸತ್ತಿನಲ್ಲಿ ಅವಿಶ್ವಾಸ ಮತ ಎದುರಿಸಬೇಕು ಅಥವಾ ರಾಜೀನಾಮೆ ನೀಡಬೇಕು ಎಂದು ಹೇಳಲಾಗುತ್ತಿದೆ.

ರಾಜೀನಾಮೆಗೆ ವಿರೋಧ ಪಕ್ಷದ ಸಾವಿರಾರು ಬೆಂಬಲಿಗರು ಮಂಗಳವಾರ ರ‍್ಯಾಲಿ ನಡೆಸಿದರು. 24 ಗಂಟೆಗಳಲ್ಲಿ ರಾಜೀನಾಮೆ ನೀಡಿ ಮತ್ತು ಚುನಾವಣೆಯಲ್ಲಿ ನಮ್ಮನ್ನು ಎದುರಿಸಿ ಅಥವಾ ಅವಿಶ್ವಾಸ ನಿರ್ಣಯಕ್ಕೆ ಸಿದ್ಧರಾಗಿ ಎಂದು ಮಾಜಿ ಪ್ರಧಾನಿ ದಿವಂಗತ ಬೆನಜೀರ್​ ಭುಟ್ಟೋ ಅವರ ಪುತ್ರ ಹೇಳಿದ್ದಾರೆ.

ಪಾಕಿಸ್ತಾನವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ವೇಳೆ ಇಮ್ರಾನ್‌ ಖಾನ್‌ ಸರ್ಕಾರವು ಘೋಷಿಸಿದ ಪರಿಹಾರವು ಸಾಕಾ ಗುವುದಿಲ್ಲ ಎಂದು ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ.

ಇಮ್ರಾನ್ ಖಾನ್ ಅವರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಅವರನ್ನು ಪದಚ್ಯುತಗೊಳಿಸಲು ವಿರೋಧ ಪಕ್ಷ ಗಳು ಸಜ್ಜಾಗಿವೆ. ಅದರ ವೈಫಲ್ಯದ ನಂತರ ಪ್ರತಿಪಕ್ಷಗಳು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.