Friday, 22nd November 2024

ಹಿಂದೂ ದೇವಾಲಯದ ಪುನರ್ ನಿರ್ಮಾಣಕ್ಕಾಗಿ 3.48 ಕೋಟಿ ರೂ. ಬಿಡುಗಡೆ ?

ಪೇಶಾವರ: ಕಳೆದ ಡಿಸೆಂಬರ್‌ನಲ್ಲಿ ಮುಸ್ಲಿಮರಿಂದ ಹಾನಿಗೊಳಗಾಗಿದ್ದ ಹಿಂದೂ ದೇವಾಲಯದ ಪುನರ್ ನಿರ್ಮಾಣಕ್ಕಾಗಿ ಪಾಕಿಸ್ತಾನದ ಖೈಬರ್ ಪಕ್ತುನ್ಖ್ವಾ ಪ್ರಾಂತೀಯ ಸರ್ಕಾರ 3.48 ಕೋಟಿ ರೂ. ಬಿಡುಗಡೆ ಮಾಡಿದೆ ಎನ್ನಲಾಗಿದೆ.

ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕರಕ್ ಜಿಲ್ಲೆಯ ಟೆರ್ರಿ ಗ್ರಾಮದಲ್ಲಿ ಕಳೆದ ವರ್ಷ ಡಿಸೆಂಬರ್ 30ರಂದು ನಾಶ ಮಾಡಲಾಗಿದ್ದ ಪರಮಹನ್ಸ್ ಜೀ ಮಹಾ ರಾಜ್ ಅವರ ಸಮಾಧಿಯ ಪುನರ್ನಿರ್ಮಾಣಕ್ಕಾಗಿ ಪ್ರಾಂತೀಯ ಸರ್ಕಾರವು ಅಕಾಫ್ ಇಲಾಖೆಗೆ 3,48,29,000 ರೂ. ಬಿಡುಗಡೆ ಮಾಡಿದೆ.

ದಾಳಿಯನ್ನು ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮುಖಂಡರು ತೀವ್ರವಾಗಿ ಖಂಡಿಸಿದ್ದರು.