Saturday, 14th December 2024

ಅನಿಲ ಸ್ಫೋಟ: ಮೂವರು ನಾಪತ್ತೆ, ೧೧ ಜನರಿಗೆ ಗಾಯ

ಚೀನಾ: ಟಿಯಾಂಜಿನ್ ನಗರದ ಅಪಾರ್ಟ್‌ ಮೆಂಟ್‌ ಕಟ್ಟಡವೊಂದರಲ್ಲಿ ಸಂಭವಿಸಿದ ಅನಿಲ ಸ್ಫೋಟದಲ್ಲಿ ಮೂವರು ಕಾಣೆಯಾಗಿದ್ದಾರೆ. ಇತರ 11 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟದಿಂದಾಗಿ ಆರು ಅಂತಸ್ತಿನ ಕಟ್ಟಡದ ಮೂರು ಮಹಡಿಗಳು ಕುಸಿದಿವೆ ಎಂದು ವರದಿಯಾಗಿದೆ. ರಕ್ಷಣಾ ಪ್ರಯತ್ನಗಳು ನಡೆಯುತ್ತಿವೆ.

2015 ರಲ್ಲಿ, ಟಿಯಾಂಜಿನ್ನ ರಾಸಾಯನಿಕ ಗೋದಾಮಿನಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ 173 ಜನರು ಮೃತಪಟ್ಟಿದ್ದರು.