ಕೀವ್ : ಉಕ್ರೇನ್ ಮಿಲಿಟರಿ ಯುದ್ಧ ಮುಂದುವರೆಸದಂತೆ 35 ಗಂಟೆಗಳ ಹೊಸ ಕರ್ಫ್ಯೂ ಘೋಷಿಸಲಾಗಿದೆ.
ಉಕ್ರೇನ್‌ನ ಕೀವ್ ಮೇಯರ್, ರಾಜಧಾನಿಯಲ್ಲಿ ಸ್ಥಳೀಯ ಕಾಲಮಾನದಿಂದ ದೀರ್ಘ ಕರ್ಫ್ಯೂ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.
ದಿನದಿಂದ ದಿನಕ್ಕೆ ಈ ಯುದ್ಧವು ಉಲ್ಬಣಗೊಳ್ಳುತ್ತಿರುವಂತೆ ತೋರುತ್ತದೆ. ವಿಶ್ವದಾದ್ಯಂತ ಅನೇಕ ದೇಶಗಳು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನ ಯುದ್ಧದ ಬಗ್ಗೆ ಟೀಕಿಸಿದ್ದು, ಯುದ್ಧ ಕೊನೆಗೊಳಿಸಲು ಕರೆ ನೀಡಿವೆ. ಇನ್ನು ರಷ್ಯಾದ ನಾಗರಿಕರು ಸಹ ಯುದ್ಧವನ್ನ ವಿರೋಧಿಸಿದ್ದಾರೆ.
ರಷ್ಯಾದ ರಕ್ಷಣಾ ಸಚಿವ ಸೆರ್ಗಿ ಶೋಯಿಗು ಅವರಿಗೆ ಹೃದಯಾಘಾತವಾಗಿದೆ ಎಂದು ಉಕ್ರೇನ್ ಸಚಿವ ಆಂಟನ್ ಹೆರಾಶ್ಚೆಂಕೊ ತಿಳಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗಿನ ಸಂಘರ್ಷದ ಬಳಿಕ ರಷ್ಯಾದ ರಕ್ಷಣಾ ಸಚಿವ ಸೆರ್ಗಿ ಶೋಯಿಗು ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ಹೆರಾಶ್ಚೆಂಕೊ ಹೇಳಿದ್ದಾರೆ.
ಉಕ್ರೇನ್ ವಿರುದ್ಧದ ಯುದ್ಧದ ಎರಡನೇ ಮಾಸ್ಟರ್ ಮೈಂಡ್ʼಗಳೆಂದು ಕರೆಯ ಲ್ಪಡುವ ಸೆರ್ಗಿ ಮತ್ತು ಪುಟಿನ್ (ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್) ವಾದ ಮಂಡಿಸಿದರು. ಆದ್ದರಿಂದ, ರಷ್ಯಾದ ರಕ್ಷಣಾ ಮಂತ್ರಿಗಳು ವಿಶ್ವದ ಮುಂದೆ ಬಂದಿಲ್ಲ. ಸೆರ್ಗಿ ಕೊನೆ ಯದಾಗಿ ಮಾ.24ರಂದು ಟಿವಿಯಲ್ಲಿ ಕಾಣಿಸಿಕೊಂಡರು.