Thursday, 12th December 2024

ತೈವಾನ್: ರೈಲು ಹಳಿ ತಪ್ಪಿ ಟ್ರಕ್ ಗೆ ಡಿಕ್ಕಿ, 36 ಮಂದಿ ಸಾವು

ತೈವಾನ್ : ಪೂರ್ವ ತೈವಾನ್ ನ ಸುರಂಗದಲ್ಲಿ ರೈಲು ಹಳಿ ತಪ್ಪಿ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ, 36 ಮಂದಿ ಮೃತಪಟ್ಟು, ಹೆಚ್ಚು ಮಂದಿ ಗಾಯಗೊಂಡಿ ದ್ದಾರೆ.

ಟೈಟುಂಗ್ ಗೆ ಪ್ರಯಾಣಿಸುತ್ತಿದ್ದ ರೈಲು, ಹುಯಾಲಿಯನ್ ನ ಉತ್ತರ ದಿಕ್ಕಿನಲ್ಲಿ ರುವ ಸುರಂಗದಲ್ಲಿ ಹಳಿಯಿಂದ ಇಳಿದು ಸುರಂಗದ ಗೋಡೆಗೆ ಡಿಕ್ಕಿ ಹೊಡೆದಿದೆ.

ಗಂಭೀರ ಗಾಯಗೊಂಡವರನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ರೈಲಿನಲ್ಲಿ ಸುಮಾರು 350 ಮಂದಿ ಪ್ರಯಾಣಿಸುತ್ತಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ಇಲಾಖೆ ತಿಳಿಸಿದೆ.

ಮೊದಲ ನಾಲ್ಕು ಬೋಗಿಗಳಿಂದ 80ರಿಂದ 100 ಜನರನ್ನು ಸ್ಥಳಾಂತರಿಸಲಾಗಿದೆ. ಐದರಿಂದ ಎಂಟು ಬೋಗಿಗಳು ‘ವಿರೂಪ ಗೊಂಡ’ ಮತ್ತು ರಕ್ಷಣೆ ಮಾಡಲು ಕಷ್ಟವಾಗುತ್ತಿದೆ ಎಂದು ಅದು ತಿಳಿಸಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily