ಅಂಬುಶ್: ಸಿರಿಯಾದಲ್ಲಿ ಸೈನಿಕರಿದ್ದ ಬಸ್ ಮೇಲೆ ಉಗ್ರರು ಬಾಂಬ್ ದಾಳಿ ನಡೆದಿದ್ದು, ಈ ದುರಂತದಲ್ಲಿ 37 ಸೈನಿಕರು ಸಾವನ್ನಪ್ಪಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಹೆದ್ದಾರಿಯಲ್ಲಿ ಸೈನಿಕರನ್ನು ಹೊತ್ತು ಸಾಗುತ್ತಿದ್ದ ಬಸ್ನ ಮೇಲೆ ಉಗ್ರರು ಬಾಂಬ್ ದಾಳಿ ನಡೆಸಿದ್ದಾರೆ.
ವರ್ಷಾಂತ್ಯದ ರಜೆ ಮುಗಿಸಿ ಮತ್ತೆ ತಮ್ಮ ಸೇನಾ ನೆಲೆಗಳಿಗೆ ಮರಳುತ್ತಿದ್ದ ಸಿರಿಯಾದ ಸೈನಿಕರು ಬಾಂಬ್ ದಾಳಿಯಿಂದ ಛಿದ್ರವಾಗಿ ದ್ದಾರೆ. ಸಿರಿಯಾದ 37 ಸೈನಿಕರು ಮೃತಪಟ್ಟಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.