Sunday, 15th December 2024

ಇಂಡಿಯಾನಾ ನೈಟ್ ಕ್ಲಬ್’ನಲ್ಲಿ ಶೂಟೌಟ್‌: ನಾಲ್ವರಿಗೆ ಗಾಯ

ವಾಷಿಂಗ್ಟನ್: ಅಮೆರಿಕದ ಇಂಡಿಯಾನಾ ನೈಟ್ ಕ್ಲಬ್ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ.

ಆಗ್ನೇಯ ಚಿಕಾಗೋದ ಗ್ಯಾರಿಯಲ್ಲಿ ಭಾನುವಾರ 2ಗಂಟೆಗೆ ನಡೆದ ಶೂಟೌಟ್ ಘಟನೆಯಲ್ಲಿ 34 ವರ್ಷದ ವ್ಯಕ್ತಿಯ ಶವ ಪ್ಲೇಯೊಸ್ ನೈಟ್ ಕ್ಲಬ್ ಪ್ರವೇಶ ದ್ವಾರದ ಬಳಿ ಇತ್ತು. ನೈಟ್ ಕ್ಲಬ್ ಒಳಗೆ 26 ವರ್ಷದ ಯುವತಿಯ ಶವ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನೈಟ್ ಕ್ಲಬ್ ನಲ್ಲಿ ನಾಲ್ವರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಚಿಂತಾಜನಕ ವಾಗಿದೆ. ಶೂಟೌಟ್ ನಲ್ಲಿ ಮೃತಪಟ್ಟವರ ಹೆಸರು ಮತ್ತು ಘಟನೆ ಕುರಿತು ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ ಎಂದು ವರದಿ ಹೇಳಿದೆ.

ನೈಟ್ ಕ್ಲಬ್ ಗೆ ಭಾರೀ ಪ್ರಮಾಣದಲ್ಲಿ ಭದ್ರತಾ ಏಜೆನ್ಸಿಯ ಅಧಿಕಾರಿಗಳು ದೌಡಾಯಿಸಿದ್ದು, ಜನರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು. ಶೂಟೌಟ್ ಯಾವ ಕಾರಣಕ್ಕೆ ನಡೆಯಿತು, ಶೂಟೌಟ್ ನಡೆಸಿದ ವ್ಯಕ್ತಿಯ ಕುರಿತು ಯಾವುದೇ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿಲ್ಲ ಎಂದು ವರದಿ ವಿವರಿಸಿದೆ.