Thursday, 12th December 2024

ಟಿ.ವಿ ಟವರ್ ಮೇಲೆ ಬಾಂಬ್ ದಾಳಿ: ಐವರ ಸಾವು

ಕೀವ್ : ರಷ್ಯಾ-ಉಕ್ರೇನ್ ದೇಶಗಳ ನಡುವೆ ಯುದ್ಧ ಮುಂದುವರೆದಿದ್ದು, ರಷ್ಯಾ ಸೈನಿಕರು ಉಕ್ರೇನ್ ರಾಜಧಾನಿ ಕೀವ್ ನಲ್ಲಿರುವ ಟೀವಿ ಟವರ್ ಮೇಲೆ ಬಾಂಬ್ ದಾಳಿ ನಡೆಸಿದ್ದು. ಐವರು ಮೃತಪಟ್ಟಿದ್ದಾರೆ.

ಕೀವ್ ನಿಂದ ಪ್ರಸಾರವಾಗುತ್ತಿದ್ದ ಎಲ್ಲಾ ಟಿವಿ ಚಾನೆಲ್ ಪ್ರಸಾರ ಬಂದ್ ಆಗಿವೆ.  ಉಕ್ರೇನ್‌ನ ಎರಡನೇ ಅತಿದೊಡ್ಡ ನಗರ ಖಾರ್ಕಿವ್‌ನಲ್ಲಿರುವ ಪ್ರಾದೇಶಿಕ ಆಡಳಿತ ಕಟ್ಟಡದ ಮೇಲೆ ಕ್ಷಿಪಣಿ ಅಪ್ಪಳಿಸಿದೆ. ಖಾರ್ಕಿವ್‌ನ ವಸತಿ ಪ್ರದೇಶಗಳಲ್ಲಿ ಶೆಲ್ ದಾಳಿ ವರದಿಯಾಗಿದೆ. ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ರಷ್ಯನ್ ಶೆಲ್ ದಾಳಿಯಲ್ಲಿ ಕನಿಷ್ಠ 17 ಜನರು ಮೃತಪಟ್ಟಿದ್ದಾರೆ.