Sunday, 8th September 2024

ಇರಾನ್​ನಲ್ಲಿ ಭಾರಿ ಮಳೆ, ಭೂಕುಸಿತ, ಪ್ರವಾಹ: 53 ಜನರ ಸಾವು

ಇರಾನ್ : ಇರಾನ್​ನಲ್ಲಿ ಭಾರಿ ಮಳೆಯಾಗುತ್ತಿದ್ದು, ಭೂಕುಸಿತ ಮತ್ತು ಪ್ರವಾಹ ಸಂಭವಿಸಿದೆ. ಇದರಲ್ಲಿ 53 ಜನರು ಮೃತಪಟ್ಟಿ  ಸಾವನ್ನಪ್ಪಿದ್ದು, ಕಾಣೆಯಾ ದವರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ.

ಎರಡು ದಿನಗಳ ಪ್ರವಾಹದಲ್ಲಿ 16 ಜನರು ಇನ್ನೂ ಕಾಣೆಯಾಗಿದ್ದಾರೆ. ಇರಾನ್​ನ 31 ಪ್ರಾಂತ್ಯಗಳ ಪೈಕಿ 18 ನಗರದಲ್ಲಿ ಸುಮಾರು 400 ಪಟ್ಟಣಗಳು ​​ಮತ್ತು ಹಳ್ಳಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ.

ರಾಜಧಾನಿ ಟೆಹ್ರಾನ್‌ನ ಈಶಾನ್ಯದಲ್ಲಿರುವ ಅಲ್ಬೋರ್ಜ್ ಪರ್ವತಗಳ ತಪ್ಪಲಿ ನಲ್ಲಿ ಶುಕ್ರವಾರ 10 ಜನರು ಸಾವನ್ನಪ್ಪಿದ್ದು, ಸುಮಾರು ಆರು ಜನರು ನಾಪತ್ತೆಯಾಗಿದ್ದಾರೆ.

ಟೆಹ್ರಾನ್‌ನ ವಾಯುವ್ಯದಲ್ಲಿರುವ ಇಮಾಮ್ಜಾದೆ ದಾವೂದ್ ಗ್ರಾಮದಲ್ಲಿ ಪ್ರವಾಹದಿಂದ ಉಂಟಾದ ಭೂಕುಸಿತ ಮತ್ತು ಅಲ್ಲಿನ ಧಾರ್ಮಿಕ ಮಂದಿರಕ್ಕೆ ಹಾನಿಯಾದ ನಂತರ 14 ಜನರು ಕಾಣೆಯಾಗಿದ್ದಾರೆ.

ದಕ್ಷಿಣ ಇರಾನ್‌ನಲ್ಲಿ ಭಾರೀ ಮಳೆಯಿಂದ 76 ಜನರು ಮೃತಪಟ್ಟಿದ್ದಾರೆ. 

error: Content is protected !!