Sunday, 15th December 2024

ಫಿಲಿಪ್ಪೀನ್ಸ್‌ನಲ್ಲಿ ಪ್ರಬಲ ಭೂಕಂಪ: 6.3 ತೀವ್ರತೆ ಕಂಪನ

ಮನಿಲಾ: ಫಿಲಿಪ್ಪೀನ್ಸ್‌ನಲ್ಲಿ ಶುಕ್ರವಾರ ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದ್ದು ತಕ್ಷಣಕ್ಕೆ ಸಾವು ನೋವಿನ ಬಗ್ಗೆ ವರದಿ ಯಾಗಿಲ್ಲ.

ರಾಜಧಾನಿ ಮನಿಲಾದಲ್ಲಿ 6.3 ತೀವ್ರತೆಯ ಪ್ರಬಲ ಕಂಪನದ ಹೊಡೆತಕ್ಕೆ ಕಟ್ಟಡಗಳು ಉರುಳಿದ್ದು, ರಸ್ತೆಗಳು ಮತ್ತು ಸೇತುವೆಗಳು ಧ್ವಂಸವಾಗಿವೆ ಎಂದು ವರದಿಯಾಗಿದೆ.

ಸ್ಥಳಕ್ಕೆ ರಕ್ಷಣಾ ತಂಡಗಳು ತೆರಳಿದ್ದು ಕಟ್ಟಡದ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.