Friday, 13th December 2024

721 ಕೋಟಿ ರೂ. ಮೌಲ್ಯದ ಕ್ರಿಪ್ಟೊ ಕರೆನ್ಸಿ ಕಳವು

ಟೋಕಿಯೋ: ಹ್ಯಾಕರ್ ಗಳು ಜಪಾನಿ ಕ್ರಿಪ್ಟೊ ಕರೆನ್ಸಿ ವಿನಿಮಯ ಕೇಂದ್ರದಿಂದ 721 ಕೋಟಿ ರೂ. ಮೌಲ್ಯದ ಕ್ರಿಪ್ಟೊ ಕರೆನ್ಸಿಯನ್ನು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಲಿಕ್ವಿಡ್ ಎನ್ನುವ ಸಂಸ್ಥೆಯಲ್ಲಿ ಈ ಕಳವು ನಡೆದಿದೆ.

ಕ್ರಿಪ್ಟೊ ಕರೆನ್ಸಿಯನ್ನು ಸಂಗ್ರಹಿಸಿ ಇಡಲಾಗಿದ್ದ ವ್ಯಾಲೆಟ್ ನಲ್ಲಿ ಅನಧಿಕೃತ ಪ್ರವೇಶ ಪಡೆದಿರುವುದು ತಜ್ಞರ ಗಮನಕ್ಕೆ ಬಂದಿತ್ತು. ಪರಿಶೀಲನೆ ನಡೆಸಿದಾಗ ಒಟ್ಟು 721 ಕೋಟಿ ರೂ. ಮೌಲ್ಯದ ಸಂಪತ್ತು ಕಳವಾಗಿರುವುದು ಪತ್ತೆಯಾಗಿದೆ.

ಕಳೆದ ವಾರ ಪಾಲಿ ನೆಟ್ ವರ್ಕ್ ಎಂಬ ಕ್ರಿಪ್ಟೊ ಕರೆನ್ಸಿ ಸಂಸ್ಥೆಯ ಕಂಪ್ಯೂಟರ್ ಗಳ ಮೇಲೆ ದಾಳಿ ನಡೆಸಿದ್ದ ಹ್ಯಾಕರ್ ಗಳು 4,400 ಕೋಟಿ ಮೌಲ್ಯದ ಸಂಪತ್ತನ್ನು ಕಳವು ಮಾಡಿದ್ದರು.

ಈ=ಆ ಘಟನೆ ಮಾಸುವ ಮೊದಲೇ ಜಪಾನ್ ನಲ್ಲಿ ಲಿಕ್ವಿಡ್ ಕ್ರಿಪ್ಟೊ ಕರೆನ್ಸಿ ವಿನಿಮಯ ಕೇಂದ್ರದ ಮೇಲೆ ಸೈಬರ್ ದಾಳಿ ನಡೆದಿದೆ.