Wednesday, 11th December 2024

ಕಂದಹಾರ್ ಪ್ರಾಂತ್ಯದಲ್ಲಿ 74 ತಾಲಿಬಾನ್ ಉಗ್ರರ ಹತ್ಯೆ

ಕಾಬೂಲ್: ಸುಮಾರು 74 ತಾಲಿಬಾನ್ ಉಗ್ರರನ್ನು ಆಫ್ಘಾನಿಸ್ತಾನದ ಕಂದಾಹರ್ ಪ್ರಾಂತ್ಯದಲ್ಲಿ ನಿರ್ನಾಮ ಮಾಡಲಾಗಿದೆ ಎಂದು ಭಾನುವಾರ ವರದಿಯಾಗಿದೆ.

ಕಂದಹಾರ್ ಪ್ರಾಂತ್ಯದ ಝೆರಿಯಾ, ದಂಡ್, ಪಾಂಜ್ವೆ ಮತ್ತು ಅರ್ಗನ್‍ದಾಬ್ ಜಿಲ್ಲೆಗಳಲ್ಲಿ ನಡೆದ ದಾಳಿಗಳಲ್ಲಿ 74 ಉಗ್ರರು ಹತರಾಗಿ, 15 ಮಂದಿ ಗಾಯಗೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಆಫ್ಘನ್ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಪಡೆಗಳ ನೆಲೆಗಳನ್ನು ಗುರಿಯಾಗಿಸಿಕೊಂಡಿದ್ದ ತಾಲಿಬಾನ್ ಉಗ್ರ ರನ್ನು ಗುರಿಯಾಗಿಸಿಕೊಂಡು ಆಫ್ಘನ್ ರಾಷ್ಟ್ರೀಯ ಸೇನೆ ನಡೆಸಿದ ಕಾರ್ಯಾಚರಣೆಗಳ ವೇಳೆ ಘರ್ಷಣೆಗಳು ನಡೆದಿವೆ. ಉಗ್ರರ ಬಳಿ ಇದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ.