ಮ್ಯಾನ್ಮಾರ್ ಸೇನೆಯು ಸೂಕಿ ಬೆಂಬಲಿತ ಸರ್ಕಾರವನ್ನು ಪದಚ್ಯುತಗೊಳಿಸಿ, ತನ್ನ ವಶಕ್ಕೆ ಆಡಳಿತ ಪಡೆದುಕೊಂಡಿತ್ತು. ವಿಚಾರಣೆಯಲ್ಲಿ ತನ್ನ ಮೇಲಿನ ಭ್ರಷ್ಟಾಚಾರ ಆರೋಪವನ್ನು ಸೂಕಿ ತಳ್ಳಿ ಹಾಕಿದ್ದರಾದರೂ ಮ್ಯಾನ್ಮಾರ್ ನ್ಯಾಯಾಲಯವು ಅವರನ್ನು ಅಪರಾಧಿ ಎಂದು ಘೋಷಿಸಿದೆ.
76 ವರ್ಷದ ಸೂಕಿ ಅವರನ್ನು ರಾಜಕೀಯದಿಂದ ದೂರ ಇರಿಸಲು ಅಲ್ಲಿನ ಮಿಲಿಟರಿ ಆಡಳಿತ ಉದ್ದೇಶಿಸಿದೆ. ಅವರು ಯಾವ ತಪ್ಪು ಮಾಡದಿದ್ದರೂ ಶಿಕ್ಷೆ ವಿಧಿಸಿದೆ ಎಂದು ಸೂಕಿ ಬೆಂಬಲಿಗರು ಆರೋಪಿಸಿದ್ದಾರೆ.