Saturday, 14th December 2024

ಹಿಮಪಾತದಿಂದ ಸರಣಿ ಅಪಘಾತ: ಮೂವರ ಸಾವು

#Pensilvania

ಪೆನ್ಸಿಲ್ವೇನಿಯಾ: ಯುಎಸ್‌ನ ಪೆನ್ಸಿಲ್ವೇನಿಯಾದ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿ, ಮೂವರು ಮೃತಪಟ್ಟಿದ್ದಾರೆ.

ಟ್ರಾಕ್ಟರ್-ಟ್ರೇಲರ್‌ಗಳು ಮತ್ತು ಕಾರುಗಳು ಸೇರಿ 40 ವಾಹನಗಳ ಸರಣಿ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಹಿಮಪಾತ ದಿಂದಾಗಿ ಚಲಿಸುತ್ತಿದ್ದ ವಾಹನಗಳು ಹಿಮದ ಮೇಲೆ ಜಾರಿ ಅಪಘಾತ ಸಂಭವಿಸಿದೆ.

ಚಾಲಕರಿಗೆ ಗೋಚರತೆ ಸಾಧ್ಯವಾಗಿ ವಾಹನಗಳು ಬ್ರೇಕ್ ಬಳಿಕವೂ ಜಾರಿ ಪರಸ್ಪರ ಡಿಕ್ಕಿ ಹೊಡೆದಿವೆ. ಸುಮಾರು 50-60 ವಾಹನಗಳು ಹೆದ್ದಾರಿಯಲ್ಲಿ ಚಲಿಸುತ್ತಿದ್ದವು ಎನ್ನಲಾಗಿದೆ.

ಘಟನೆಯಲ್ಲಿ ಸುಮಾರು 20 ಮಂದಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿದ್ದರಿಂದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ ಬೆಂಕಿಯನ್ನು ನಂದಿಸಿವೆ.