ಖಾಠ್ಮಂಡು: ಪ್ರಭಾಸ್ ಅಭಿನಯದ ಸಿನಿಮಾ ‘ಆದಿಪುರುಷ್’ ವಿಶ್ವದಾ ದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ಚಿತ್ರಮಂದಿಗಳು ತುಂಬಿದ ಪ್ರದರ್ಶನ ಕಾಣುತ್ತಿವೆ. ಇದೇ ಖುಷಿಯಲ್ಲಿರುವಾಗಲೇ ನಿರ್ಮಾಪಕರಿಗೆ ಬ್ಯಾನ್ ಬಿಸಿ ತಟ್ಟಿದೆ.
ನೇಪಾಳದಲ್ಲಿ ‘ಆದಿಪುರುಷ್’ ಸಿನಿಮಾ ಬ್ಯಾನ್ ಮಾಡುವುದಾಗಿ ಕಠ್ಮಂಡು ಮಹಾನಗರದ ಮೇಯರ್ ಬಲೆಂದ್ರ ಶಾ ‘ಆದಿಪುರುಷ್’ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಸಿನಿಮಾದಲ್ಲಿ ಸೀತೆಯ ಬಗ್ಗೆ ಇರುವ ಒಂದು ಡೈಲಾಗ್ ಅನ್ನು ತೆಗೆದು ಹಾಕುವಂತೆ ಕೇಳಿಕೊಂಡಿದ್ದಾರೆ.
ಮೇಯರ್ ಬಲೆಂದ್ರ ಶಾ ‘ಆದಿಪುರುಷ್’, ನಿರ್ಮಾಪಕ ಹಾಗೂ ನಿರ್ದೇಶಕ ರಿಗೆ ಮೂರು ದಿನಗಳ ಗಡುವು ನೀಡಿದ್ದಾರೆ. ಅಷ್ಟರೊಳಗೆ ಡೈಲಾಗ್ ಅನ್ನು ತೆಗೆದು ಹಾಕುವಂತೆ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದ್ದಾರೆ.
‘ಆದಿಪುರುಷ್’ ಸಿನಿಮಾದ ಒಂದು ಡೈಲಾಗ್ ನೇಪಾಳದ ಕಠ್ಮಂಡುವಿನ ಮೇಯರ್ ನಿದ್ದೆ ಕೆಡಿಸಿದೆ.
‘ಆದಿಪುರುಷ್’ ಸಿನಿಮಾದಲ್ಲಿ “ಸೀತೆ ಭಾರತದ ಮಗಳು” ಎಂದು ಹೇಳುವ ಡೈಲಾಗ್ ಇದೆ. ಈ ಡೈಲಾಗ್ ವಿರುದ್ಧ ಕಠ್ಮಂಡು ಮೇಯರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೂರು ದಿನಗಳ ಗಡುವು ನೀಡಿದ್ದು. ಸಿನಿಮಾದಲ್ಲಿ ಡೈಲಾಗ್ ಅನ್ನು ತೆಗೆದು ಹಾಕುವಂತೆ ಎಚ್ಚರಿಕೆ ಕೊಟ್ಟಿದ್ದಾರೆ.
ರಾಮಾಯಣದ ಪ್ರಕಾರ, ಸೀತೆಯ ನೇಪಾಳದ ಜಾನಕ್‌ಪುರದಲ್ಲಿ ಜನಿಸಿದ್ದಾರೆ. ಶ್ರೀರಾಮ ಇಲ್ಲಿಗೆ ಬಂದು ಸೀತೆಯನ್ನು ಮದುವೆ ಆಗಿದ್ದ ಎಂಬ ಉಲ್ಲೇಖವಿದೆ. ಆದರೆ, ‘ಆದಿಪುರುಷ್’ ಸಿನಿಮಾದಲ್ಲಿ “ಸೀತೆ ಭಾರತದ ಮಗಳು” ಎಂದು ಡೈಲಾಗ್ ಇದೆ. ಇದರ ವಿರುದ್ಧವೇ ಕಠ್ಮಂಡು ಮೇಯರ್ ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ. ಡೈಲಾಗ್ ತೆಗೆಯದೇ ಹೋದಲ್ಲಿ ಹಿಂದಿ ಸಿನಿಮಾ ರಿಲೀಸ್‌ಗೆ ಬಿಡುವುದಿಲ್ಲ ಎಂದಿದ್ದಾರೆ.
ಕಠ್ಮಂಡು ಮೇಯರ್ ಬರೀ ನೇಪಾಳದಲ್ಲಿ ಅಷ್ಟೇ ಅಲ್ಲ. ಭಾರತದಲ್ಲೂ ಈ ಡೈಲಾಗ್ ಅನ್ನು ತೆಗೆಯುವಂತೆ ಹೇಳಿದ್ದಾರೆ.