Sunday, 15th December 2024

ಯುದ್ಧವಿಮಾನದಲ್ಲೇ ಮಗುವಿಗೆ ಜನ್ಮವಿತ್ತ ಆಫ್ಘನ್ ಮಹಿಳೆ

ವಾಷಿಂಗ್ಟನ್: ಕಾಬೂಲಿನಿಂದ ಹಾರಿದ್ದ ಅಮೆರಿಕದ ಯುದ್ಧವಿಮಾನ ಸಿ-17 ರಲ್ಲಿ ಪ್ರಯಾಣಿಸಿದ್ದ ಆಫ್ಘನ್ ಮಹಿಳೆ ಮಗುವಿಗೆ ಜನ್ಮವಿತ್ತಿರುವುದಾಗಿ ವರದಿಯಾಗಿದೆ.

ಕಾಬೂಲಿನಿಂದ ಹೊರಟ ವಿಮಾನ ಜರ್ಮನಿಯ ಬರ್ಲಿನ್ ನಲ್ಲಿ ಇಳಿದಿತ್ತು. ಸ್ಥಳಾಂತರ ಕಾರ್ಯಾ ಚರಣೆಗಳಿಗಾಗಿ ಬರ್ಲಿನ್ ಸೇನಾ ನೆಲೆಯನ್ನು ಅಮೆರಿಕ ಬಳಸಿಕೊಳ್ಳುತ್ತಿದೆ.

ವಿಮಾನ ಮೇಲಕ್ಕೇರಿದ ಸ್ವಲ್ಪ ಸಮಯದಲ್ಲೇ ಗರ್ಭಿಣಿಯಲ್ಲಿ ನೋವು ಕಾಣಿಸಿಕೊಂಡಿತ್ತು. ವಿಮಾನ ಚಾಲಕ ವಿಷಯ ತಿಳಿದು ಎತ್ತರದಲ್ಲಿ ಹಾರುತ್ತಿದ್ದ ವಿಮಾನ ವನ್ನು ಕೆಳಮಟ್ಟದಲ್ಲಿ ಹಾರಾಟ ನಡೆಸಿ ದ್ದಾನೆ.

ನೆಲಮಟ್ಟದಿಂದ ಮೇಲಕ್ಕೆ ಹಾರಾಟ ನಡೆಸುವ ಸಂದರ್ಭ ಒತ್ತಡ ಕಂಡುಬರುವ ಕಾರಣ, ವಿಮಾನವನ್ನು ಎಂದಿ ಗಿಂತ ಕೆಳಮಟ್ಟಕ್ಕೆ ಇಳಿಸಲಾಗಿತ್ತು. ಇದರಿಂದಾಗಿ ತಾಯಿಯ ಆರೋಗ್ಯ ತಹಬದಿಗೆ ಬಂದು ಆಕೆಯ ಜೀವ ಉಳಿಯಲು ಕಾರಣವಾಯಿತು ಎಂದು ಅಮೆರಿಕ ಸೇನಾ ವಕ್ತಾರರು ತಿಳಿಸಿದ್ದಾರೆ. ವಿಮಾನ ಬರ್ಲಿನ್ ನಲ್ಲಿ ಇಳಿಯುತ್ತಲೇ ಅಮೆರಿಕ ಸೇನೆಯ ವೈದ್ಯಕೀಯ ಸಿಬ್ಬಂದಿ ತಾಯಿ ಮತ್ತು ಮಗುವನ್ನು ಕರೆದೊಯ್ಯಲು ಸಿದ್ಧರಿದ್ದರು.