Thursday, 12th December 2024

ಅಫ್ಸಿನ್‌ನಲ್ಲಿ 4.0 ತೀವ್ರತೆಯ ಭೂಕಂಪ

ಫ್ಸಿನ್ (ಟರ್ಕಿ): ಟರ್ಕಿಯ ಅಫ್ಸಿನ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿದೆ.

ಟರ್ಕಿಯ ಅಫ್ಸಿನ್‌ನಲ್ಲಿ ಸೋಮವಾರ ಭೂಮಿಯಿಂದ 10 ಕಿಮೀ ಆಳದಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿದೆ.  ಅಫ್ಸಿನ್ ಟರ್ಕಿಯ ಒಂದು ಪಟ್ಟಣವಾಗಿದೆ.

ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.