Sunday, 15th December 2024

ಲಘು ವಿಮಾನ ದುರಂತ: ನಾಲ್ವರ ಸಾವು

ಚಂಬ್ಲೀ (ಅಮೆರಿಕ): ಅಟ್ಲಾಂಟಾದ ಈಶಾನ್ಯ ಭಾಗದ ಉಪನಗರದಲ್ಲಿರುವ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಲಘು ವಿಮಾನ ಅಪಘಾತಕ್ಕೀಡಾಗಿ ನಾಲ್ವರು ಮೃತಪಟ್ಟಿದ್ದಾರೆ.

ಸಿಂಗಲ್ ಎಂಜಿನ್‌ ಸೆಸ್ಸಾನಾ 210 ವಿಮಾನವು ಡೆಕಾಲ್ಬ್-ಪೀಚ್ ಟ್ರೀ ವಿಮಾನ ನಿಲ್ದಾಣದಲ್ಲಿ ಅಪಘಾತ ಕ್ಕೀಡಾಗಿ, ಬೆಂಕಿ ಹೊತ್ತಿಕೊಂಡಿತು. ವಿಮಾನದಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ.

ಕೌಂಟಿ ಒಡೆತನದ ವಿಮಾನ ನಿಲ್ದಾಣದ ರನ್‌ವೇನಲ್ಲಿ ಈ ವಿಮಾನ ಅಪಘಾತಕ್ಕೀಡಾಯಿತು. ತಕ್ಷಣ 15 ಮಂದಿ ಅಗ್ನಿಶಾಮಕ ಸಿಬ್ಬಂದಿ ರನ್‌ ವೇ ಕಡೆಗೆ ಓಡಿ, ತ್ವರಿತಗತಿಯಲ್ಲಿ ಬೆಂಕಿ ನಂದಿಸಿದರು.

ಅಪಘಾತದಲ್ಲಿ ಮೃತಪಟ್ಟವರ ಹೆಸರನ್ನು ಅಧಿಕಾರಿಗಳು ತಕ್ಷಣಕ್ಕೆ ಬಹಿರಂಗಪಡಿಸಲಿಲ್ಲ.