ಇಂಗ್ಲೆಂಡ್: ಅರಣ್ಯ ನಾಶ ಮತ್ತು ಹವಾಮಾನ ಬದಲಾವಣೆ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಮೂಡಿಸುವ ಭಾರತೀಯ ಮೂಲದ ಆರು ವರ್ಷದ ಬಾಲಕಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ದೈನಂದಿನ ಪಾಯಿಂಟ್ಸ್ ಆಫ್ ಲೈಟ್ ಪ್ರಶಸ್ತಿಗೆ ಭಾಜನಳಾಗಿದ್ದಾಳೆ.
ಅಲಿಷಾ ಗಾಧಿಯಾ ಅವರು, ಯುಕೆ ಮೂಲದ ಲಾಭರಹಿತ ಕೂಲ್ ಅರ್ಥ್‌ನ ಹವಾಮಾನ ಕಾರ್ಯಕರ್ತೆ ಮತ್ತು ಮಿನಿ ರಾಯಭಾರಿಯಾಗಿ ದ್ದಾರೆ. ಇದು ಅರಣ್ಯ ನಾಶ ನಿಲ್ಲಿಸಲು ಮತ್ತು ವ್ಯವಹಾರಗಳನ್ನು ಹೆಚ್ಚು ಸಮರ್ಥನೀಯವಾಗಿ ಸೃಷ್ಟಿಸಲು ಕೆಲಸ ಮಾಡುತ್ತದೆ. ಅವಳು ತನ್ನ ಶಾಲೆಯಲ್ಲಿ ಹವಾಮಾನ ಬದಲಾವಣೆ ಕ್ಲಬ್ ಅನ್ನು ಸ್ಥಾಪಿಸಿದ್ದಾಳೆ.
ಇತರರನ್ನು ಪರಿಸರ ಸಂರಕ್ಷಿಸುವಂತೆ ಪ್ರೋತ್ಸಾಹಿಸುತ್ತಾಳೆ. ಹಾಗೂ ಕಸ ತೆಗೆಯುವುದು ಮತ್ತು ಮರಗಳನ್ನು ನೆಡುವುದು ಮುಂತಾದ ಚಟುವಟಿಕೆಗಳನ್ನು ಮಾಡುತ್ತಿದ್ದಾಳೆ.
ನನಗೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಪ್ರಶಸ್ತಿ ನೀಡಿದ್ದು ಹಾಗೂ ನನಗೆ ಪತ್ರ ಬರೆದಿರುವುದಕ್ಕೆ ಕೃತಜ್ಞಳಾ ಗಿದ್ದೇನೆ. ನಾನು ಇಂತಹ ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ ಅಂತಾ ಎಂದಿಗೂ ಭಾವಿಸಿರಲಿಲ್ಲ ಎಂದು ಹೇಳಿದ್ದಾಳೆ.