Monday, 16th September 2024

America shootout: ರಾಷ್ಟ್ರೀಯ ಹೆದ್ದಾರಿಯಲ್ಲಿ ಶೂಟೌಟ್‌; ಏಳು ವಾಹನ ಚಾಲಕರಿಗೆ ಗಂಭೀರ ಗಾಯ- ದುಷ್ಕರ್ಮಿ ಎಸ್ಕೇಪ್‌

America Shootout

ವಾಷಿಂಗ್ಟನ್‌: ಅಂತರರಾಜ್ಯ ಹೆದ್ದಾರಿಯಲ್ಲಿ ದುಷ್ಕರ್ಮಿಯೋರ್ವ ಏಕಾಏಕಿ ಗುಂಡಿನ ದಾಳಿ(America shootout) ನಡೆಸಿದ್ದು, ಏಳು ಮಂದಿ ಗಂಭೀರವಾಗಿ ಗಾಯಾಗೊಂಡಿರುವ ಘಟನೆ ಅಮೆರಿಕದ ಕೆಂಟಕಿ ಪ್ರದೇಶದಲ್ಲಿ ನಡೆದಿದೆ. ಇನ್ನು ದುಷ್ಕರ್ಮಿ ಸ್ಥಳದಿಂದ ಎಸ್ಕೇಪ್‌ ಆಗಿದ್ದು, ಆತನಿಗಾಗಿ ಪೊಲೀಸರು ಭಾರೀ ಹುಡುಕಾಟ ನಡೆಸಿದ್ದಾರೆ.

ನಿನ್ನೆ ಸಂಜೆ 6 ಗಂಟೆಗೆ ಈ ಘಟನೆ ನಡೆದಿದ್ದು, ಲಾರೆನ್‌ ಕೌಂಟಿ ಪಟ್ಟಣದ ಹೊರಗೆ ಸುಮಾರು ಒಂಬತ್ತು ಮೈಲುಗಳಷ್ಟು ದೂರದಲ್ಲಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ದುಷ್ಕರ್ಮಿ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಪರಿಣಾಮವಾಗಿ ವಾಹನಗಳು ಸೇತುವೆಗೆ ಡಿಕ್ಕಿ ಹೊಡೆದಿವೆ. ಇನ್ನು ಕೆಲವು ವಾಹನಗಳು ಸಮೀಪದ ಅರಣ್ಯ ಪ್ರದೇಶಕ್ಕೆ ನುಗ್ಗಿವೆ. ಇನ್ನು ದುಷ್ಕರ್ಮಿ ಡೇನಿಯಲ್ ಬೂನ್ ರಾಷ್ಟ್ರೀಯ ಅರಣ್ಯದಲ್ಲಿ ಅಡಗಿ ಕುಳಿತಿರುವ ಬಗ್ಗೆ ವರದಿಯಾಗಿದ್ದು, ಪೊಲೀಸರು ಭಾರೀ ಹುಡುಕಾಟ ನಡೆಸುತ್ತಿದ್ದಾರೆ.

ಲೆಕ್ಸಿಂಗ್‌ಟನ್‌ನಿಂದ ದಕ್ಷಿಣಕ್ಕೆ 90 ಮೈಲಿ (145 ಕಿಮೀ) ದೂರದಲ್ಲಿರುವ ಡೇನಿಯಲ್ ಬೂನ್ ರಾಷ್ಟ್ರೀಯ ಅರಣ್ಯದ ಬಳಿ ಸುಮಾರು 8,000 ರಷ್ಟಿರುವ ಲಂಡನ್‌ನ ಮೇಯರ್ ರಾಂಡಾಲ್ ವೆಡ್ಲ್, ಫೇಸ್‌ಬುಕ್‌ನಲ್ಲಿನ ಪೋಸ್ಟ್‌ನಲ್ಲಿ ಕೆಲವು ಗುಂಡು ಹಾರಿಸಿದ್ದು ಸೇರಿದಂತೆ ಏಳು ಜನರು ಗಾಯಗೊಂಡಿದ್ದಾರೆ ಎಂದು ಹೇಳಿದರು. ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅವರು ಹೇಳಿದರು. ಯಾವುದೇ ಸಾವುನೋವುಗಳ ಸಂಖ್ಯೆ ಬಗ್ಗೆ ಪೊಲೀಸರು ಹೆಚ್ಚಿನ ವಿವರಗಳನ್ನು ನೀಡಲಿಲ್ಲ.

ಇನ್ನು ದುಷ್ಕರ್ಮಿಯನ್ನು ಜೋಸೆಫ್ ಎ ಕೌಚ್ ಎಂದಿ ಗುರುತಿಸಲಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಆತ ಫೋಟೋ ಮತ್ತು ವಿವರ ಸಮೇತ ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. ಕೆಳಗಿನ ವ್ಯಕ್ತಿ, ಜೋಸೆಫ್ ಎ ಕೌಚ್, ನಿರ್ಗಮನ 49/KY-909 ಪ್ರದೇಶದಲ್ಲಿ ಸಂಭವಿಸಿದ ಶೂಟೌಟ್‌ನ ಆರೋಪಿ. ಈ ವ್ಯಕ್ತಿಯ ಇರುವಿಕೆ ಅಥವಾ ಸ್ಥಳದ ಕುರಿತು ನೀವು ಯಾವುದೇ ಮಾಹಿತಿಯನ್ನು ಹೊಂದಿದ್ದರೆ, ದಯವಿಟ್ಟು ಲಂಡನ್-ಲಾರೆಲ್ ಕೌಂಟಿಯನ್ನು ಸಂಪರ್ಕಿಸಿ. 911 ಅಥವಾ 606-878-7000 ಗೆ ಕರೆ ಮಾಡುವ ಮೂಲಕ ಕೇಂದ್ರವನ್ನು ಸಂಪರ್ಕಿಸಿ ಪೊಲೀಸರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಅಮೆರಿಕದ ಬ್ಯಾರೋ ಕಂಟ್ರೀಯ ವಿಂಡರ್‌ನಲ್ಲಿರುವ ಅಪಲಾಚಿ ಪ್ರೌಢ ಶಾಲೆಯಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಗೆ ನಾಲ್ವರು ಸ್ಥಳದಲ್ಲೇ ಕೊನೆಯುಸಿರೆಳೆದಿರುವ ಘಟನೆ ವರದಿಯಾಗಿದೆ. ಜಾರ್ಜಿಯಾದಲ್ಲಿರುವ ಈ ಪ್ರೌಢಶಾಲೆಯಲ್ಲಿ ಘಟನೆ ನಡೆದಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ: America Shootout: ಶಾಲೆಗೆ ನುಗ್ಗಿ ಏಕಾಏಕಿ ಗುಂಡಿನ ದಾಳಿ; ವಿದ್ಯಾರ್ಥಿಗಳು ಸೇರಿ ನಾಲ್ವರು ಬಲಿ; ಬಾಲಕ ಅರೆಸ್ಟ್‌

Leave a Reply

Your email address will not be published. Required fields are marked *