ವಾಷಿಂಗ್ಟನ್: ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ(America Shootout) ನಡೆದಿದ್ದು, ಕನಿಷ್ಟ ನಾಲ್ವರು ಬಲಿಯಾಗಿದ್ದಾರೆ. ಘಟನೆಯಲ್ಲಿ 12ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬರ್ಮಿಂಗ್ಹ್ಯಾಮ್ನ ಫೈವ್ ಪಾಯಿಂಟ್ಸ್ ಸೌತ್ ಪ್ರದೇಶದಲ್ಲಿ ರಾತ್ರಿ 11 ಗಂಟೆಯ ಸುಮಾರಿಗೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆದಿದೆ. ಮೂವರು ಬಲಿಪಶುಗಳು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
BPD officers are on the scene of multiple people shot with possibly multiple casualties.
— Bhampolice (@BhamPolice) September 22, 2024
Five Points South area.
Public Information Division is en route and will be providing Media Partners with live updates. pic.twitter.com/rB0Y8TJW1I
ಇನ್ನು ಅನೇಕ ಶೂಟರ್ಗಳು ಇದ್ದರು ಎಂದು US ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇದುವರೆಗೆ ಯಾರನ್ನೂ ಅರೆಸ್ಟ್ ಮಾಡಿಲ್ಲ. ಇನ್ನು ಗಾಯಾಳುಗಳನ್ನುಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಗುಂಡಿನ ದಾಳಿ ಹಿಂದೆ ಯಾರ ಕೈವಾಡ ಇದೆ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
#JUSTIN : 4 dead, dozens injured following mass shooting near downtown Birmingham, Alabama#Birmingham #Birmingham #UK #Shooting #UnitedKingdom #Alabama pic.twitter.com/vYYUn4Je4n
— upuknews (@upuknews1) September 22, 2024
ಎರಡು ವಾರಗಳ ಹಿಂದೆ ಅಮೆರಿಕ(America Shootout)ದ ಶಾಲೆಯೊಂದಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಗೆ ನಾಲ್ವರು ಸ್ಥಳದಲ್ಲೇ ಕೊನೆಯುಸಿರೆಳದಿರುವ ಘಟನೆ ವರದಿಯಾಗಿತ್ತು. ಜಾರ್ಜಿಯಾದ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬ್ಯಾರೋ ಕಂಟ್ರೀಯ ವಿಂಡರ್ನಲ್ಲಿರುವ ಅಪಲಾಚಿ ಪ್ರೌಢ ಶಾಲೆಯಲ್ಲಿ ಬುಧವಾರ ಬೆಳಗ್ಗೆ 10:20ಕ್ಕೆ ಶೂಟೌಟ್ ನಡೆದಿದೆ. ಸುಮಾರು 1,900 ವಿದ್ಯಾರ್ಥಿಗಳಿರುವ ಈ ಶಾಲಗೆ ನುಗ್ಗಿದ ಬಂದೂಕುಧಾರಿಯೊಬ್ಬ ಏಕಾಏಕಿ ಗುಂಡು ಹಾರಿಸಿದ್ದಾನೆ. ಗುಂಡೇಟು ತಗುಲಿ ಇಬ್ಬರು ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ಘಟನೆಯಲ್ಲಿ ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿರುವ ವರದಿಯಾಗಿದೆ. ಈ ಶಾಲೆಯು ರಾಜ್ಯದ ರಾಜಧಾನಿಯಾದ ಅಟ್ಲಾಂಟಾದಿಂದ ಈಶಾನ್ಯಕ್ಕೆ ಸುಮಾರು 45 ಮೈಲಿಗಳು (70 ಕಿಲೋಮೀಟರ್) ವಿಂಡರ್ ಪಟ್ಟಣದಲ್ಲಿದೆ.
ಘಟನೆ ಬಗ್ಗೆ ಬಗ್ಗೆ ವರದಿಯಾಗುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಶೂಟರ್ನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಆತನನ್ನು ವಿಚಾರಣೆಗೊಳಪಡಿಸಲಾಗಿದ್ದು, ಘಟನೆಯ ಹಿಂದೆ ಯಾವುದೇ ಉದ್ದೇಶ ಇರಲಿಲ್ಲ. ಇದೊಂದು ಉದ್ದೇಶ ರಹಿತ ದಾಳಿಯಾಗಿದೆ. ಇನ್ನು ಶೂಟರ್ 14ಬಾಲಕನಾಗಿದ್ದು, ಈತ ಅದೇ ಶಾಲೆಯಲ್ಲಿ ಓಡುತಿದ್ದ ಎನ್ನಲಾಗಿದೆ. ಇನ್ನು ಶೂಟರ್ ಬಾಲಕನನ್ನುಕೋಲ್ಟ್ ಗ್ರೇ ಎಂದು ಗುರುತಿಸಲಾಗಿದೆ.
ಈ ಸುದ್ದಿಯನ್ನೂ ಓದಿ: PM Modi Visit US : ಪ್ರಧಾನಿ ಮೋದಿಯನ್ನು ಅಪ್ಪಿ ಬರಮಾಡಿಕೊಂಡ ಅಮೆರಿಕ ಅಧ್ಯಕ್ಷ ಜೋ ಬೈಡೆನ್